Friday 8 May 2015

visuddhi magga/Buddhagosa life story ಬುದ್ಧಘೋಸರ ಚರಿತ್ರೆ

                   ಬುದ್ಧಘೋಸರ ಚರಿತ್ರೆ
ಬೋಧಿವೃಕ್ಷದ ಸಮೀಪ ಘೋಸವೆಂಬ ಪಟ್ಟಣವಿತ್ತು. ಆಗ ಅಲ್ಲಿನ ಆಡಳಿತಗಾರ ಬ್ರಾಹ್ಮಣ ಕೇಸಿ, ಕೇಸಿನಿ ಎಂಬ ಯುವತಿಯೊಂದಿಗೆ ವಿವಾಹವಾದನು. ಒಬ್ಬ ಹಿರಿಯ ಭಿಕ್ಷು ಕೇಸಿಯನ ಮಿತ್ರರಾಗಿದ್ದರು. ಆಗ ತಿಪಿಟಕವು ಸಿಂಹಳ ಭಾಷೆಯಲ್ಲಿತ್ತು. ಹೀಗಾಗಿ ಬಹಳಷ್ಟು ಜನರಿಗೆ ಅದು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಆ ಥೇರರು ಯಾವಾಗ ತಿಪಿಟಕವು ಮಗಧಿ ಭಾಷೆಗೆ (ಪಾಳಿಗೆ) ಅನುವಾದವಾಗುವುದೆಂದು ಕಾತರದಿಂದಿದ್ದರು. ಆಗ ಅವರಿಗೆ ತಾವತಿಂಸ ಸುಗತಿಯಲ್ಲಿರುವ ಘೋಸನೆಂಬ ದೇವನೊಬ್ಬ ಮಾತ್ರ ಈ ಕಾರ್ಯಕ್ಕೆ ಅತ್ಯಂತ ಸಮರ್ಥನೆಂದು ಅರಿವಾಯಿತು. ಆಗ ಆ ದೇವನಿಗೆ ಭೂಲೋಕದಲ್ಲಿ ಅದರಲ್ಲು ಕೇಸಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟುವಂತೆ ಕೇಳಿಕೊಳ್ಳಲಾಯಿತು. ಅದರಂತೆಯೇ ಆಯಿತು ಸಹಾ. ಅವರ ಕಾಲವು ಕ್ರಿ.ಶ. 5ನೇ ಶತಮಾನವೆಂದು ಪರಿಗಣಿಸಲಾಗಿದೆ.
ಬಾಲಕನಿಗೆ ಘೋಷನೆಂದು ನಾಮಕರಣ ಮಾಡಲಾಯಿತು. ಬಾಲಕನು ವೇದಗಳಲ್ಲಿ ಪಾರಂಗತನಾದನು. ಒಂದುದಿನ ಆತನು ವಿಷ್ಣುವಿನ ದೇವಸ್ಥಾನದಲ್ಲಿ ಕಡಲೆಕಾಯಿಯನ್ನು ತಿನ್ನುತ್ತಿದ್ದಾಗ ಬ್ರಾಹ್ಮಣರು ಕೋಪದಿಂದ ನಿಂದಿಸಿದರು. ಆಗ ಆ ಬಾಲಕನು ವಿಷ್ಣುವು ಸವರ್ಾಂತಯರ್ಾಮಿಯಾಗಿರುವಾಗ ಈ ಕಡಲೆಕಾಯಿಯೂ ಸಹಾ ವಿಷ್ಣುವಾಗುವುದು. ಹಾಗಾದರೆ ವಿಷ್ಣು ಯಾರು? ದೇವರು ಸವ್ಯವ್ಯಾಪಿಯಾಗಿರುವಾಗ, ನಿದರ್ಿಷ್ಟವಾಗಿ ಇವರೇ ವಿಷ್ಣುವೆಂದು ನಾನು ಹೇಗೆ ತಿಳಿಯಲಿ? ಈ ರೀತಿಯ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ. ಒಮ್ಮೆ ಕೇಸಿಯು ಆ ಪಟ್ಟಣದ ನಾಯಕನಿಗೆ ವೇದಗಳ ಗದ್ಯವೊಂದನ್ನು ವಿವರಿಸುತ್ತಿರುವಾಗ ಅಲ್ಲಿ ಕ್ಲಿಷ್ಟತೆಯೊಂದು ಉದ್ಭವಿಸಿ ಉತ್ತರಿಸಲು ತಡವರಿಸಿದರು. ಆದರೆ ಅದಕ್ಕೆ ಪರಿಹಾರ ಬರೆದಿಟ್ಟಂತಹ ಘೋಷರವರ ತಾಳೆಗರಿಯು ನಂತರ ದೊರಕಿತು. ಆಗ ಅವರು ದಿನಕ್ಕೆ ಆರುಸಾವಿರ ಪದಗಳನ್ನು ಕಲಿಯುತ್ತಿದ್ದರೆಂದು ತಿಳಿಯಿತು.
ಬುದ್ಧಘೋಷರ ಪ್ರವಜ್ರ್ಯ :
ಒಮ್ಮೆ ಹಿರಿಯ ಭಿಕ್ಷುವನ್ನು ಕೇಸಿಯ ಮನೆಗೆ ಔತಣಕ್ಕಾಗಿ ಕರೆದಿದ್ದನು. ಆ ಹಿರಿಯ ಭಿಕ್ಷುವು ಘೋಷರವರ ಚಾಪೆಯ ಮೇಲೆ ಕುಳಿತು ತಿನ್ನುತ್ತಿದ್ದರು. ಇದನ್ನು ಕಂಡಂತಹ ಘೋಷರು ಕೋಪಭರಿತರಾಗಿ ಹಿರಿಯ ಭಿಕ್ಷುವನ್ನು ನಿಂದಿಸಿದರು. ನಂತರ ಆ ಭಿಕ್ಷುವಿಗೆ ವೇದಗಳಾಗಲಿ ಇನ್ನಿತರ ಅಂಶಗಳಾಗಲಿ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಆಗ ಹಿರಿಯ ಭಿಕ್ಷುವು ಕ್ಲಿಷ್ಟವಾದ ವೇದಗಳನ್ನು, ಶ್ಲೋಕಗಳನ್ನು ಹೇಳಿದಾಗ ನಿರುತ್ತರಾದ ಘೋಷರು ಆ ಥೇರರಿಗೆ ಅವರ ಸಿದ್ಧಾಂತದ ಬಗ್ಗೆ ಕೇಳಿದರು. ಆಗ ಆ ಥೇರರು ಅಭಿಧಮ್ಮದ ಕುಶಲ, ಅಕುಶಲ, ಅಭ್ಯಾಕತ, ಧಮ್ಮಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲಾಗದ ಘೋಷರು ಇದು ಯಾರ ಸಿದ್ಧಾಂತವೆಂದು ಕೇಳಿದರು ಹಾಗು ತಮಗೂ ಬೋಧಿಸಿ ಎಂದು ಕೇಳಿಕೊಂಡರು. ಆದರೆ ಆಗ ಥೇರರು ಈ ಸಿದ್ಧಾಂತವು ಸಮ್ಮಾಸಂಬುದ್ಧರ ಶಾಸನವೆಂದು ಹಾಗು ಈ ಗಂಭೀರ ಪ್ರಜ್ಞಾವನ್ನು ಕಲಿಯಬೇಕಾದರೆ ಮೊದಲು ಆತನು ಭಿಕ್ಷುವಾಗಬೇಕೆಂದು ತಿಳಿಸಿದರು. ವಿದ್ಯೆಯ ಹಂಬಲದಿಂದ ಕೂಡಿದಂತಹ ಘೋಷರು ಅದರಂತೆಯೇ ಗೃಹ ಜೀವನವನ್ನು ತ್ಯಜಿಸಿ ತ್ಯಾಗಮಯಿ ಜೀವನವಾದ ಭಿಕ್ಷು ಜೀವನಕ್ಕೆ ಪ್ರವೇಶಿಸಿದರು. ಕೇವಲ ಒಂದೇ ಒಂದು ತಿಂಗಳಲ್ಲೇ ಇಡೀ ತಿಪಿಟಕವನ್ನು ಕಲಿತುಬಿಟ್ಟರು. ಇದರಿಂದಾಗಿ ಪೂರ್ಣ ಪ್ರಮಾಣಿತ ಭಿಕ್ಷುವಾದ ಅವರು ನಾಲ್ಕು ವಿಧದ ವಿಶ್ಲೇಷಣೆಯ ಮಾರ್ಗ (ಚತುಪಟಿಸಂಭಿದ ಮಗ್ಗ) ಸಂಪಾದಿಸಿದರು. ತಮ್ಮ ಗುರುವಿನ ಬಳಿಯಲ್ಲಿ ಅವರು ತಚಕಮಟ್ಠಾನ (ಕೇಶ, ರೋಮ, ನಖ, ದಂತ, ತಚ (ಚರ್ಮ) ಎಂಬ ಶರೀರದ ಐದು ಅಂಗಗಳ ಕಲ್ಪನಾತ್ಮಕ ಜಪ) ಪಡೆದು ಸಮಾಧಿ ಪಡೆದರು. ಅದರ ಪರಿಣಾಮವಾಗಿ ಶ್ರದ್ಧಾಪೂರ್ವಕ ತ್ರಿಶರಣು ಪಡೆದರು.
ಹೀಗಾಗಿ ಅವರು ಪಾಂಡಿತ್ಯ ಗುರುತಿಸಿ ಬುದ್ಧಘೋಸ ಎಂಬ ಬಿರುದಿನಿಂದ ಕರೆಯಲಾರಂಭಿಸಿದರು. ಒಂದುದಿನ ಅವರ ಮನಸ್ಸಿನಲ್ಲಿ ಈ ಬಗೆಯ ಯೋಚನೆಯು ಉಂಟಾಯಿತು: ಬುದ್ಧವಚನವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವವರು ಯಾರು? ನಾನೋ ಅಥವಾ ನನ್ನ ಗುರುಗಳೋ? ಆದರೆ ಅವರ ಈ ಯೋಚನೆಯನ್ನು ಆಸವ ಕ್ಷಯ ಹೊಂದಿರುವಂತಹ ಆ ಥೇರರು ಆಲಿಸಿಯೇ ಬಿಟ್ಟರು. ಅವರು ಆತನ ಈ ಅಹಂಕಾರ ವತರ್ಿತ ಯೋಚನೆಗೆ ನೀನು ಹೀಗೆ ಯೋಚನೆ ಮಾಡುವುದು ನಿನಗೆ ಅರ್ಹವಲ್ಲ ಎಂದು ಖಂಡಿಸಿದರು ಹಾಗು ಕ್ಷಮೆಯಾಚಿಸಲು ಕೇಳಿದರು. ಆಗ ಶಿಷ್ಯರಾಗಿದ್ದಂತಹ ಬುದ್ಧಘೋಷರು ಪಾಪಲಜ್ಜೆ ಹಾಗು ಪಾಪಭೀತಿಯನ್ನು ಹೊಂದಿ ಗುರುವಿನಲ್ಲಿ ಕ್ಷಮೆ ಯಾಚಿಸಿದರು.
ನನ್ನಿಂದ ತಪ್ಪಾಯಿತು ಕ್ಷಮಿಸಿ.
ನಾನು ನಿನಗೆ ಕ್ಷಮಿಸಬೇಕಾದರೆ ನೀನು ಇಲ್ಲಿಂದ ಶ್ರೀಲಂಕೆಗೆ ಹೋಗಿ ಅಲ್ಲಿ ಭಾಷೆಯಲ್ಲಿನ (ಸಿಂಹಳ) ಭಗವಾನರ ವಚನವಾದ ತಿಪಿಟಕವನ್ನು ಮಾಗಧಿ (ಪಾಳಿ) ಭಾಷೆಗೆ ಅನುವಾದಿಸಬೇಕು ಹಾಗು ಜೊತೆಗೆ ವ್ಯಖ್ಯಾನವನ್ನು ರಚಿಸಬೇಕು ಎಂದರು.
ಗುರುವರ್ಯರೇ, ನಾನು ಹಾಗೇ ಮಾಡುವೆನು. ಆದರೆ ಅಲ್ಲಿಗೆ ಹೋಗುವ ಮುನ್ನ ನನ್ನ ತಂದೆಯವರ ಮಿಥ್ಯಾದೃಷ್ಟಿಗಳನ್ನು ಅಳಿಸಿಹಾಕಲು ಅಪ್ಪಣೆಯನ್ನು ನೀಡಿ ಎಂದು ಕೇಳಿಕೊಂಡರು. ನಂತರ ಗುರುವಿನ ಅಪ್ಪಣೆ ಪಡೆದು ತಂದೆಯ ಬಳಿಗೆ ಬಂದರು. ಅಲ್ಲಿ ತಮ್ಮ ಪ್ರಜ್ಞಾಶೀಲತೆಯನ್ನು ಬಳಸಿ ತಮ್ಮ ತಂದೆಯವರನ್ನು 4ನೇ ದಿನದಂದು ಸೋತಪನ್ನ ಮಾಡುವುದರಲ್ಲಿ ಯಶಸ್ವಿಯಾದರು.
ಬುದ್ಧದತ್ತರೊಂದಿಗೆ ಭೇಟಿ
ಅವರು ಮೊಟ್ಟಮೊದಲು ಶ್ರೀಲಂಕೆಗೆ ಹೋಗುವಾಗ ದಾರಿಯಲ್ಲಿ ಇನ್ನೊಂದು ಹಡಗು ಶ್ರೀಲಂಕದಿಂದ ಭಾರತಕ್ಕೆ ಬರುತ್ತಿತ್ತು. ದೇವೇಂದ್ರ ಸಕ್ಕನ ಇಚ್ಛೇಯಂತೆ ಎರಡು ಹಡಗುಗಳು ನಿಂತಾಗ ಆ ಇನ್ನೊಂದು ಹಡಗಿನಲ್ಲಿ ಮಹಾಥೇರರಾದ ಬುದ್ಧದತ್ತರಿದ್ದರು. ಪೂಜ್ಯ ಬುದ್ಧದತ್ತ ಹಾಗು ಬುದ್ಧಘೋಷರು ಪರಸ್ಪರ ಭೇಟಿಯಾಗುತ್ತಾರೆ. ಬುದ್ಧಘೋಷರವರು ತಾವು ಸಿಂಹಳ ಭಾಷೆಯಿಂದ ಮಗಧಿ ಭಾಷೆಗೆ ತಿಪಿಟಕ ವ್ಯಾಖ್ಯಾನಿಸಲು ಹೋಗುತ್ತಿದ್ದೇನೆ ಎಂದು ತಿಳಿಸಿದಾಗ, ಬುದ್ಧದತ್ತರು ಅವರಿಗೆ ಆಲಂಗಿಸಿ ಹೀಗೆ ಹೇಳುತ್ತಾರೆ:
ನಾನು ಸಹಾ ಈ ಉದ್ದೇಶದಿಂದಲೇ ಸಿಂಹಳಕ್ಕೆ ಹೊರಟಿದ್ದೆನು. ಆದರೆ ನನ್ನ ಆಯಸ್ಸು ಅಲ್ಪವೆಂದು ಸ್ಪಷ್ಟವಾಗಿ ಅರ್ಥವಾಗಿದೆ. ಹೀಗಾಗಿ ತವರುನಾಡಿಗೆ ಹಿಂತಿರುಗುತ್ತಿದ್ದೇನೆ, ನಾನು ತಿಪಿಟಕಗಳ ಪೂರ್ಣ ವ್ಯಾಖ್ಯಾನ ಮಾಡಿಲ್ಲವಾದರೂ ಸಹಾ ಜೀನಾಲಂಕಾರ, ಹಂತವಂಸ, ಧಾತುವಂಶ ಹಾಗು ಬೋಧಿವಂಶವನ್ನು ರಚಿಸಿದ್ದೇನೆ ಎಂದು ನುಡಿದು ತಮಗೆ ದೇವೇಂದ್ರ ನೀಡಿದ್ದಂತಹ ನೋವು ನಿವಾರಕ ದಿವ್ಯ ಕಾಯಿ ಒಂದನ್ನು ಬುದ್ಧಘೋಷರಿಗೆ ನೀಡಿದರು. ಅದರ ವಿಶೇಷತೆ ಏನೆಂದರೆ ಯಾವುದೇ ನೋವು ಇದ್ದರೂ ಸಹಾ ಅದನ್ನು ಕಲ್ಲಿಗೆ ಉಜ್ಜಿ ಆ ರಸವನ್ನು ನೋವಿರುವ ಕಡೆ ಹಚ್ಚಿದರೆ ಕ್ಷಣಾರ್ಧದಲ್ಲಿ ನೋವುಗಳೆಲ್ಲಾ ಮಾಯವಾಗುತ್ತಿತ್ತು, ಅದು ಕಡಿಮೆಯಾಗುತ್ತಿರಲಿಲ್ಲ.
ವಿಶುದ್ಧಿ ಮಾಗ್ಗದ ರಚನೆ:
ನಂತರ ಗುರುವಿನ ಅಪ್ಪಣೆಯಂತೆ ಶ್ರೀಲಂಕೆಗೆ (ಸಿಂಹಳ) ಪ್ರಯಾಣ ಬೆಳೆಸಿದರು. ನಂತರ ಸಿಂಹಳ ದ್ವೀಪದಲ್ಲಿ ಅವರು ಸಂಗ್ರಾಮರಾಜ ಮಹಾಥೇರರನ್ನು ಭೇಟಿ ಮಾಡಿದರು. ಅಲ್ಲಿ ತಾವು ತಥಾಗತರಿಂದ ಬೋಧಿತವಾದ ತಿಪಿಟಕವನ್ನು ಸಿಂಹಳ ಭಾಷೆಯಿಂದ ಮರಳಿ ಪಾಳಿ (ಮಾಗಧಿ) ಭಾಷೆಗೆ ಅನುವಾದ ಮಾಡಲೆಂದು ಬಂದಿದ್ದೇನೆ ಎಂದು ತಿಳಿಸಿದರು. ಆಗ ಅಲ್ಲಿನ ಗುರುಗಳು ಬುದ್ಧಘೋಷರವರ ಸಾಮಥ್ರ್ಯ ಪರೀಕ್ಷಿಸಲೆಂದು ಸಂಯುತ್ತನಿಕಾಯದ  ಗಾಥೆಯೊಂದನ್ನು ನೀಡಿದರು.
ನಂತರ ಘೋಷರು ಸರಿ ಎಂದು ತಮ್ಮ ನಿವಾಸಸ್ಥಾನಕ್ಕೆ ಹಿಂತಿರುಗುತ್ತಾರೆ. ನಂತರ ಆ ಮಧ್ಯಾಹ್ನದಿಂದಲೇ ಆ ಗಾಥೆಯನ್ನು ವಿವರಿಸಿ ವ್ಯಾಖ್ಯಾನಿಸಲು ವಿಸುದ್ಧಿ ಮಾಗ್ಗವನ್ನು ರಚಿಸುತ್ತಾರೆ. ಶೀಲ ಪ್ರತಿಷ್ಠಾಪನೆಯಿಂದ ಆರಂಭಿಸಿದ ಅವರು ವಿಶುದ್ಧಿಮಗ್ಗವನ್ನು ರಚಿಸಿ ಮಲಗುತ್ತಾರೆ. ಆದರೆ ಆ ಕೃತಿಯನ್ನು ದೇವೇಂದ್ರನಾದ ಸಕ್ಕನು ಅಪಹರಿಸುತ್ತಾನೆ. ನಂತರ ಎಚ್ಚೆತ್ತ ಘೋಷರು ಪುನಃ ವಿಶುದ್ಧಿಮಗ್ಗವನ್ನು ರಚಿಸುತ್ತಾರೆ. ನಂತರ ತಮ್ಮ ತಲೆಯ ಕೆಳಗೆ ಆ ಮಹತ್ತರವಾದ ಗ್ರಂಥವನ್ನು ಇಟ್ಟುಕೊಂಡು ಪುನಃ ನಿದ್ದೆಗೆ ಜಾರುತ್ತಾರೆ. ಆದರೆ ಸಕ್ಕ ಪುನಃ ಅದನ್ನು ಅಪಹರಿಸಿಬಿಡುತ್ತಾನೆ. ಹೀಗಾಗಿ ಘೋಷರವರು ಪುನಃ ವಿಶುದ್ಧಿ ಮಾರ್ಗ ಬರೆದು ನಿದ್ರೆಗೆ ವಶವಾಗುತ್ತಾರೆ. ಈ ಸಾರಿ ಸಕ್ಕನು ಹಿಂದಿನ ಎರಡು ಗ್ರಂಥಗಳನ್ನು ತಂದು ತಲೆಯ ಬಳಿ ಇಟ್ಟು ಹೋಗುತ್ತಾನೆ. ಮುಂಜಾನೆ ಎದ್ದಂತಹ ಘೋಷರು ಮೂರು ಗ್ರಂಥಗಳನ್ನು ಕಂಡು ಆನಂದಿತರಾಗುತ್ತಾರೆ. ಆಶ್ಚರ್ಯವೇನೆಂದರೆ ಪ್ರತಿ ಗ್ರಂಥವು ಹತ್ತು ಲಕ್ಷದ ಇಪ್ಪತ್ಮೂರು ಸಾವಿರದ ಒಂಬೈನೂರುಗಳಷ್ಟು ಅಕ್ಷರಗಳಿಂದ ಕೂಡಿದ್ದವು. ಅಷ್ಟೇ ಅಲ್ಲದೆ ಪ್ರತಿಯೊಂದು ಅದೇ ವಿಷಯದ ಬಗ್ಗೆ ಚಾಚುತಪ್ಪದೆ ಒಂದೇರೀತಿಯ ವಿವರಣೆಯನ್ನು ಒಳಗೊಂಡಿತ್ತು. ಆ ಗ್ರಂಥಗಳನ್ನು ಹಿರಿಯ ಥೇರರು ಪರಿಶೀಲಿಸಿದರು. ಅವರ ಮನಸ್ಸು ಪ್ರಸನ್ನವಾಯಿತು. ತಿಪಿಟಕಗಳ ವ್ಯಾಖ್ಯಾನಕ್ಕೆ ಯೋಗ್ಯಶೀಲನೇ ದೊರೆತಿದ್ದಾನೆ ಎಂದು ಧೃಢೀಕರಣ ಪಟ್ಟು ಅವರು ಘೋಷರಿಗೆ ಅನುವಾದಕ್ಕೆ ಹಾಗು ತಿಪಿಕಟಗಳ ವ್ಯಾಖ್ಯಾನಕ್ಕೆ ಅನುಮತಿ ನೀಡಿದರು. ಹಾಗೆಯೇ ಅಂದಿನಿಂದ ಅವರನ್ನು ಬುದ್ಧಘೋಷರೆಂದು ಕರೆಯಲಾರಂಭಿಸಿದರು. ಈ ಭೂಮಿಯಲ್ಲಿ ಬುದ್ಧರಂತೆಯೇ ಜನರಿಗೆ ನಾಯಕರೆಂದು ಕರೆಯಲ್ಪಟ್ಟರು. ಕೆಲವು ಭಿಕ್ಷುಗಳು ಅವರನ್ನು ಮೆತ್ತೆಯ ಬೋಧಿಸತ್ತರ ಅವತಾರವೆಂದು ಉದ್ಗಾರ ಮಾಡಿದರು. ಆದರೆ ಸ್ವಯಂ ಬುದ್ಧಘೋಷರವರು ತಮ್ಮ ಗ್ರಂಥವೊಂದರಲ್ಲಿ ತಾವು ಮೆತ್ತಯ್ಯನವರ ಶಿಷ್ಯನಾಗುವೆನು ಎಂದು ಸಂಕಲ್ಪಿಸಿರುವುದು ಕಂಡುಬಂದಿದೆ.
ಬುದ್ಧಘೋಷರವರ ಪಾಂಡಿತ್ಯ:
ಶ್ರೀಲಂಕೆಯಲ್ಲಿದ್ದಾಗ ಬುದ್ಧಘೋಷರು ಏಳು ಅಂತಸ್ತಿನ ಮಹಡಿಯ ಕೆಳ ಅಂತಸ್ತಿನಲ್ಲಿ ವಾಸಿಸುತ್ತಿದ್ದರು. ಅಲ್ಲಿದ್ದಾಗ ಭಗವಾನರ ತಿಪಿಟಕಗಳನ್ನು ಪ್ರತಿದಿನವೂ ಅನುವಾದ ಮಾಡುತ್ತಿದ್ದರು. ಕೇವಲ ಮೂರು ತಿಂಗಳಲ್ಲೇ ಅವರು ತಿಪಿಟಕದ ಅನುವಾದವನ್ನು ಮುಗಿಸಿದರು. ನಂತರ ಸ್ವದೇಶಕ್ಕೆ ಹೋಗಲು ಅನುಮತಿ ಕೋರಿದರು. ಆಗ ಕೆಲ ಭಿಕ್ಖುಗಳು ಅವರಿಗೆ ಸಂಸ್ಕೃತದ ಜ್ಞಾನವಿದೆಯೇ ಎಂದು ಸಂಶಯಪಟ್ಟಾಗ ಬುದ್ಧಘೋಷರು ಮಾರನೆಯ ದಿನವೇ ನಾಲ್ಕು ವಿಧದ ಪರಿಷತ್ತಿನ ಮುಂದೆ ಸಂಸ್ಕೃತದಲ್ಲಿಯೇ ಅಭೂತಪೂರ್ವವಾದ ಬುದ್ಧವಚನವನ್ನು ಪ್ರವಚಿಸಿದರು. ಇದರಿಂದಾಗಿ ಭಿಕ್ಷುಗಳಿಗೆ ಪೂರ್ಣ ತೃಪ್ತಿಯಾಯಿತು. ನಂತರ ಬುದ್ಧಘೋಷರು ಭಾರತಕ್ಕೆ ಹಿಂತಿರುಗಿದರು. ನಂತರ ಅಲ್ಲಿಂದ ಬಮರ್ಾಗೆ ಹೋಗಿ ಅಲ್ಲಿಯೂ ಸಹಾ ಬುದ್ಧ ಧಮ್ಮವನ್ನು ಸಂವರ್ಧನೆಗೊಳಿಸಿದರು.
ಚರಿತ್ರೆಯ ಶೋಧನೆಯಿಂದಾಗಿ ಬುದ್ಧಘೋಷರು ಮಿಲಿಂದಪಹನ್ನಾದ ಕತರ್ೃವಾದ ನಾಗಸೇನ ಹಾಗು ಬುದ್ಧಚರಿತೆಯ ಲೇಖಕರಾದ ಅಶ್ವಘೋಷರ ನಂತರ ಬಂದವರೆಂದು ತಿಳಿದುಬರುತ್ತದೆ.
ಹಾಗೆಯೇ ಅವರ ಕೃತಿಗಳನ್ನು ವೀಕ್ಷಿಸುವಾಗ ಅವರು ಖಗೋಳ ಶಾಸ್ತ್ರದಲ್ಲಿ, ವ್ಯಾಕರಣದಲ್ಲಿ, ಭೌಗೋಳಿಕ ಶಾಸ್ತ್ರದಲ್ಲಿ, ಇತರ ಧರ್ಮಗಳ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರೆಂದು ಹಾಗೆಯೇ ಭಾರತೀಯ ರಾಜವಂಶಗಳ ಬಗ್ಗೆ ಅಪಾರ ಮಾಹಿತಿಯನ್ನು ಹೊಂದಿದ್ದರೆಂದು ಹಾಗೆಯೇ ಪಕ್ಷಿಗಳ ಬಗ್ಗೆ, ಹೂಗಳ ಬಗ್ಗೆ, ಪುರಾತನ ಸಂಪ್ರದಾಯಗಳ ಬಗ್ಗೆ ತಿಳುವಳಿಕೆ ಹೊಂದಿದ್ದರೆಂದು ತಿಳಿದುಬರುತ್ತದೆ. ಇನ್ನೂ ಆಶ್ಚರ್ಯಕರ ವಿಷಯವೇನೆಂದರೆ ಅವರು ಶರೀರದ ವಿಚ್ಛೇಧನ (ಶೋಧನ ಶಾಸ್ತ್ರ ಂಟಿಚಿಟಿಠಟಥಿ ) ಬಗ್ಗೆ ಪ್ರಬುದ್ಧಕರವಾದ ರೀತಿಯಲ್ಲಿ 32 ಅಂಗಗಳ ಬಗ್ಗೆ ವಿಶ್ಲೇಷಣಕರವಾದ ರೀತಿಯಲ್ಲಿ ಹಾಗು ಜ್ಞಾನದಯವಾಗುವ ರೀತಿಯಲ್ಲಿ ರಚಿಸಿರುವುದು. ಹಾಗೆಯೇ ಅವರ ಗ್ರಂಥದಲ್ಲಿ ಸಾಂಖ್ಯ ಸಿದ್ಧಾಂತ ಹಾಗು ಯೋಗ ಸಿದ್ಧಾಂತವನ್ನು ಅತ್ಯಂತ ವೈಚಾರಿಕ ರೀತಿಯಲ್ಲಿ ಖಂಡಿಸಿರುವುದು ಕಂಡುಬಂದಿದೆ. ಹಾಗೆಯೇ ಚಿತ್ತದ ಬಗ್ಗೆ ಬುದ್ಧ ಹಾಗು ಸಾರಿಪುತ್ತರ ನಂತರ ಪ್ರಬುದ್ಧವಾದ ರೀತಿಯಲ್ಲಿ ವಿಶ್ಲೇಷಣೆ ಹಾಗು ಪರಿಣಾಮಾತ್ಮಕ ರೀತಿಯಲ್ಲಿ ಜ್ಞಾನೋದಯವಾಗುವಂತೆ ರಚಿಸಿರುವುದು ಗಮನಾರ್ಹ ಅಂಶವಾಗಿದೆ. ಹಾಗೆಯೇ ಪ್ರತಿಯೊಂದು ವಿಷಯವನ್ನು ಹೇಗೆ ವಿಶ್ಲೇಷಣಾತ್ಮಕವಾಗಿ ಅರಿಯಬಹುದೆಂದು ಅವರ ಗ್ರಂಥಗಳಲ್ಲಿ ತಿಳಿಯಬಹುದಾಗಿದೆ. ಕರ್ಮ ಸಿದ್ಧಾಂತಕ್ಕೂ ಹಳೆಯ ವಗರ್ಿಕರಣದ ಜೊತೆಗೆ ತಮ್ಮ ರೀತಿಯಲ್ಲೇ ವಗರ್ಿಕರಿಸಿರುವುದು ಸಹಾ ಉತ್ತಮ ಬೆಳವಣಿಗೆಯಾಗಿದೆ. ಒಟ್ಟಿನಲ್ಲಿ ಬುದ್ಧಘೋಷರವರು ವಿಶುದ್ಧಿ ಮಾರ್ಗವನ್ನು ಬೌದ್ಧರ ವಿಶ್ವಜ್ಞಾನ ಕೋಶದಂತೆ ರಚಿಸಿರುವುದು ಶ್ಲಾಘನೀಯವಾಗಿದೆ.
ಅಂತಿಮ ಪ್ರಯಾಣ
ಬುದ್ಧಘೋಷರು ತಮ್ಮ ವ್ಯಾಖ್ಯಾನದ ಮಹತ್ತರವಾದ ಕಾರ್ಯವನ್ನು ನೆರವೇರಿಸಿದ ನಂತರ ತಮ್ಮ ಸ್ವಗ್ರಾಮಕ್ಕೆ ಹಾಗು ಸ್ವಗೃಹವೆಂದು ಹಿಂತಿರುಗಿದರು. ಅದಾದ ಸ್ವಲ್ಪಕಾಲದ ನಂತರ ಅವರ ತಾಯ್ತಂದೆಯರು ತೀರಿಹೋದರು ಹಾಗು ಮರಣದ ನಂತರ ತುಸಿತಾ ದೇವಲೋಕದಲ್ಲಿ ಜನಿಸಿದರು.
ಈ ಘಟನೆಯ ನಂತರ ಅವರಿಗೂ ತಾವು ಹೆಚ್ಚುಕಾಲ ಬದುಕಲಾರೆ ಎಂದು ಧ್ಯಾನದಲ್ಲಿ ಅರಿತರು. ಹೀಗಾಗಿ ಅವರು ತಮ್ಮ ಗುರುಗಳನ್ನು ಭೇಟಿಮಾಡಿ ಗೌರವಪೂರ್ಣವಾದ ವಂದನೆಗಳನ್ನು ಸಮಪರ್ಿಸಿ ಬೋಧಗಯಾದಲ್ಲಿರುವ ಬೋಧಿವೃಕ್ಷದಕಡೆಗೆ ಸಾಗಿದರು. ಅಲ್ಲಿ ಕೆಲಕಾಲ ಕಳೆದನಂತರ ಸಾವು ಹತ್ತಿರವಾಗುತ್ತಿದ್ದಂತೆ ಅವರು ಈ ಬಗೆಯ ಚಿಂತನೆ ಮಾಡಿದರು: ಮೂರು ಬಗೆಯ ಮರಣಗಳಿವೆ, ಸಮುಚ್ಛೇದ ಮರಣ, ಕ್ಷಣಿಕ ಮರಣ ಮತ್ತು ಸಮ್ಮುತ್ತಿ ಮರಣ. ಇದರಲ್ಲಿ ಸಮುಚ್ಛೇದ ಮರಣವು ಅರಹಂತರು ಪ್ರಾಪ್ತಿಮಾಡುವಂತಹುದು. ಕ್ಷಣಿಕ ಮರಣವು ತಾತ್ಕಾಲಿಕವಾಗಿ ಚಿತ್ತವೃತ್ತಿಗಳನ್ನು ತಡೆಯುವಂತಹುದು. ಹಾಗು ಸಮ್ಮುತ್ತಿ ಮರಣವು ಸರ್ವ ಜೀವಿಗಳು ಪಡೆಯುವಂತಹುದು. ಇದರಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಅವರು ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಹೀಗೆ ಕೊನೆಗಾಲದಲ್ಲೂ ತಾತ್ವಿಕ ಚಿಂತನೆಯಲ್ಲೇ ಅವರು ಮುಂದೆ ಮೆತ್ತೆಯ್ಯಬುದ್ಧರ ಶಿಷ್ಯರಾಗುವದಕ್ಕೋಸ್ಕರವಾಗಿ ಅರಹಂತರಾಗಲು ಹೋಗಲಿಲ್ಲ. ಹೀಗೆ ಸಾವು ಅಪ್ಪಿದಂತಹ ಅವರು ಮುಂದೆ ತುಸಿತ ದೇವಲೋಕದಲ್ಲಿ ಜನಿಸಿದರು. ಅಲ್ಲಿ ಅವರಿಗೆ ಏಳು ಯೋಜನ ವಿಸ್ತೀರ್ಣದ ವಿಶಾಲತೆಯುಳ್ಳ ಸುವರ್ಣ ಭವನದಲ್ಲಿ ಉಗಮಿಸುತ್ತಾರೆ. ಯಾವಾಗ ಮೆತ್ತಯ್ಯ ಬೋಧಿಸತ್ವರು ಬುದ್ಧರಾಗುವರೋ ಆಗ ಇವರೂ ಸಹಾ ಅವರ ಶಿಷ್ಯರಾಗುತ್ತಾರೆ. ಅವರ ಸಾವಿನ ನಂತರ ಅವರ ಪವಿತ್ರ ಭೌತಿಕ ಶರೀರದ ಅಸ್ತಿಗೆ ಬೋಧಿವೃಕ್ಷದ ಸಮೀಪದಲ್ಲೇ ಸ್ತೂಪ ಕಟ್ಟಿಸಿದ್ದಾರೆ.
ಬುದ್ಧಘೋಷರ ಕೃತಿಗಳು ಹಾಗು ಭಾಷ್ಯ (ವ್ಯಾಖ್ಯಾನ) ಗಳು
ತಿಪಿಟಕದ ಭಾಷ್ಯಗಳ ಉದಯವು ಇಲ್ಲಿ ಬುದ್ಧರಿಂದಲೇ ಆಯಿತೆಂದು ಹೇಳಬಹುದು. ಕೆಲವೊಂದು ಸುತ್ತಗಳನ್ನು ವ್ಯಾಖ್ಯಾನಿಸುವಾಗ ಮಹಾಸುತ್ತಗಳೆಂದು ಹೆಸರಿಸಿ ಸುದೀರ್ಘ ವಿವರಣೆಗಳನ್ನು ನೀಡುತ್ತಿದ್ದರು. ಹಾಗೆಯೇ ಭಗವಾನರ ಕಾಲದಲ್ಲಿಯೇ ಸಾರಿಪುತ್ರರು ಬಹಳಷ್ಟುಬಾರಿ ಬಾಷ್ಯ ಮಾಡುತ್ತಿದ್ದುದು ಕಂಡುಬರುವುದು. ಹಾಗೆಯೇ ಮಹಾಕಚ್ಚಾಯನ, ಮಹಾಕಸ್ಸಪ, ಮಹಾಕೊಟ್ಠಿಕ, ಮೊಗ್ಗಲ್ಲಾನ ಮುಂತಾದವರು ವ್ಯಾಖ್ಯಾನಿಸಿದ ಉದಾಹರಣೆಗಳು ಹೇರಳವಾಗಿ ನಮಗೆ ತಿಪಿಟಕದಲ್ಲಿ ಕಂಡುಬರುವುದು. ಹಾಗೆಯೇ ಮುಂದೆ ಬಂದಂತಹ ತಿಸ್ಸ ಮೊಗ್ಗಲಿಪುತ್ತರವರ ಕಥಾವತ್ತು ನಾಗಸೇನರವರ ಮಿಲಿಂದಪನ್ಹಾ ಇದೇ ಸಾಲಿನಲ್ಲಿ ಸೇರುತ್ತವೆ.
ಈಗ ನಂತರ ಬಂದಂತಹ ಬುದ್ಧಘೋಷರವರ ಅಭೂತಪೂರ್ವ ಕಾಣಿಕೆಗಳನ್ನು ನೋಡೋಣ. ಬುದ್ಧಘೋಷರು ಸಿಂಹಳ ದ್ವೀಪಕ್ಕೆ ಹೊರಡುವ ಮುನ್ನವೇ,
(1) ಜ್ಞಾನೋದಯ (ಞಾನೋದಯ) ಹಾಗು (2) ಅಟ್ಠಸಾಲಿನಿ (ಅಭಿಧಮ್ಮದ ಧಮ್ಮಸಂಗಿನಿಯ ಭಾಷ್ಯ) ಬರೆದಿದ್ದರು.
(3) ವಿಸುದ್ಧಿ ಮಾಗ್ಗ (ಜಗದ್ವಿಖ್ಯಾತ ಗ್ರಂಥ): ಇದನ್ನು ಬೌದ್ಧ ಸಾಹಿತ್ಯದ ವಿಶ್ವಕೋಶವೆನಿಸುವಷ್ಟು ಕೌಶಲ್ಯಯುತವಾಗಿ, ಸುಂದರವಾಗಿ, ವಿಷಯಗಳ ಸಂಗ್ರಹಣೆಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ.
(4) ಸಮಂತಪಾಸಾದಿಕ (ವಿನಯಪಿಟಕದ ಭಾಷ್ಯ)
(5) ಕಂಖಾವಿತರಣಾನಿ
(6) ಸುಮಂಗಳವಿಲಾಸಿನಿ (ಸುತ್ತಪಿಟಿಕದ ಭಾಷ್ಯ)
(7) ಪಪಂಚಸೂದನಿ (ಮಜ್ಝಿಮನಿಕಾಯದ ಭಾಷ್ಯ)
(8) ಸಾರತ್ಥಪಕಾಸಿನಿ (ಸಂಯುಕ್ತನಿಕಾಯದ ಭಾಷ್ಯ)
(9) ಮನೋರಥಾ ಪುರಾನಿ (ಅಂಗುತ್ತರನಿಕಾಯ ಭಾಷ್ಯ)
(10) ಧಮ್ಮಪದ ಅಟ್ಠಕಥಾ (ಧಮ್ಮಪದದ ಭಾಷ್ಯ)
ಬುದ್ಧಘೋಷರ ಅಭಿಧಮ್ಮ ಭಾಷ್ಯಗಳು
(1) ಅಟ್ಠಸಾಲಿನಿ (ಧಮ್ಮಸಂಗನಿ ಭಾಷ್ಯ)
(2) ಸಮ್ಮೋಹ ವಿನೊದಿನಿ (ವಿಭಂಗ ಭಾಷ್ಯ)
(3) ಧಾತುಕಥಾಪಕರಣಠ್ಠಕಥಾ (ಧಾತಕಧಾದ ಭಾಷ್ಯ)
(4) ಪುಗ್ಗಲ ಪಞ್ಞತ್ತಿ ಪಕರಣಟ್ಠಕಥಾ (ಪುಗ್ಗಲ ಪಞ್ಞತ್ತಿಯ ಭಾಷ್ಯ)
(5) ಕಥಾವತ್ಥು ಅಟ್ಠಕತಾ (ಕಥಾವತ್ಥುವಿನ ಭಾಷ್ಯ)
(6) ಯಮಕಪಕರಣಟ್ಠಕಥಾ (ಪಟ್ಠಾಣದ ಭಾಷ್ಯ)
(7) ಪಟ್ಠಾನ ಪಕರಣ ಅಟ್ಠಕಥಾ
ಇಷ್ಟೇ ಅಲ್ಲದೆ (1) ಪಿಟಕಟ್ಯಲಕ್ಖಣ ಗ್ರಂಥ (2) ಪದ್ಯಚೂಡಾಮಣಿ (ಸಂಸ್ಕೃತ ಗ್ರಂಥವಾಗಿದ್ದು ಬುದ್ಧ ಭಗವಾನರ ಜೀವನಚರಿತ್ರೆಯಾಗಿದ್ದು, ಇದು ಇದೇ ಲೇಖಕರ ಅಥವಾ ಅದೇ ಹೊಸತಿನ ಬೇರೋಬ್ಬರದಿದ್ದಿರಬಹುದೆಂದು ಸಂದೇಹಿಸಲಾಗಿದೆ (ಇದೊಂದು ಗ್ರಂಥ ಮಾತ್ರ ಇವರದ್ದೇ ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ)]
ಬುದ್ಧಘೋಷರ ಪರಂಪರೆ:
ಇದು ಬುದ್ಧಘೋಷರ ಸಂಕ್ಷಿಪ್ತ ವಿವರಣೆಯಾಗಿದೆ

ಮಹಾವಂಶ ಗ್ರಂಥದ ಪ್ರಕಾರ ಬುದ್ಧಘೋಷರು ಪೂರ್ಣ ತಿಪಿಟಿಕಕ್ಕೆ ಭಾಷ್ಯ ಬರೆದಿದ್ದಾರೆ. ಆದರೆ ಬಹುಪಾಲು ವ್ಯಾಖ್ಯಾನವಾಗಿದ್ದರೂ ಸಹಾ ಸ್ವಲ್ಪಭಾಗ ಮಿಕ್ಕಿದ್ದು ಅವನ್ನು ಅವರ ಶಿಷ್ಯರು ಪರಂಪರಾಗತಾನುವಾಗಿ ಪೂರ್ಣಗೊಳಿಸಿದ್ದಾರೆ. ಅವರೆಂದರೆ ಸಮಕಾಲೀನ ಲೇಖಕರಾಗಿದ್ದಂತಹ ಧಮ್ಮಪಾಲ ಆಚರಿಯ, ಮಹಾನಾಮ, ನವ ಮೊಗ್ಗಲ್ಲಾನ ಹಾಗು ಚುಲ್ಲ ಬುದ್ಧಘೋಸ.
ಬುದ್ಧಘೋರಿಗಿಂತ ಮುಂಚೆಯೇ ಬುದ್ಧದತ್ತರವರು ನಾಲ್ಕು ಗ್ರಂಥಗಳಿಗೆ ಭಾಷ್ಯ ರಚಿಸಿದ್ದರು.

No comments:

Post a Comment