Thursday 12 April 2018

ವಿಶುದ್ಧಿ ಮಾರ್ಗದ 2 part ಅಧ್ಯಾಯ 6 ಅಶುಭ ಕಮಟ್ಠಾನ ನಿದ್ದೇಸ ಅಶುಭ ಧ್ಯಾನಗಳ ವಿವರಣೆ:

ಅಧ್ಯಾಯ 6ಅಶುಭ ಕಮಟ್ಠಾನ ನಿದ್ದೇಸಅಶುಭ ಧ್ಯಾನಗಳ ವಿವರಣೆ:

10 ವಿಧದ ಅಶುಭಗಳಿವೆ. ಶವಗಳ ಧ್ಯಾನಗಳಾದ ಇವನ್ನು ಕಸಿಣದ ನಂತರ ವಗರ್ಿಕರಿಸಿದೆ. ಅವು ಹೀಗಿವೆ: ಊದಿದ ಶವ, ವರ್ಣವಿಕಾರದ ಶವ, ಕೀವುಗಟ್ಟಿದ ಶವ, ಕತ್ತರಿಸಲ್ಪಟ್ಟ ಶವ, ಕಚ್ಚಲ್ಪಟ್ಟ ಶವ, ಚೆಲ್ಲಾಪಿಲ್ಲಿಯಾದ ಶವ, ಕೊಚ್ಚಿ ಚೆಲ್ಲಾಪಿಲ್ಲಿಯಾದ ಶವ, ರಕ್ತಸಿಕ್ತವಾದ ಶವ, ಕ್ರಿಮಿಭರಿತ ಶವ, ಅಸ್ತಿಪಂಜರ.

10 ಅಶುಭಾ ಧ್ಯಾನಗಳು :

ಅಶುಭಾ ಧ್ಯಾನಗಳನ್ನು ದೇಹದ ಸುಂದರತೆಯ ಭಾವನೆಯನ್ನು ದೂರೀಕರಿಸುವುದಕ್ಕೆ ದೇಹದ ಅಸಹ್ಯತೆಯನ್ನು ಅರಿಯುವುದಕ್ಕೆ ದೇಹದ ಕ್ಷಣಿಕತೆ, ಮರಣದ ನಿಶ್ಚಿತತೆ, ದುಃಖ ಹಾಗು ಅನಾತ್ಮತೆಯನ್ನು ಅರಿಯಲು ಧ್ಯಾನಿಸುತ್ತಾರೆ. ಈ ಧ್ಯಾನದ ಎಲ್ಲೆಯು ಪ್ರಥಮ ಸಮಾಧಿಯಾದರೂ ಸಹಾ ಇದರೊಂದಿಗೆ ನಂತರ ವಿಪಶ್ಶನ ಜೋಡಿಸಿದಾಗ ಇದರಿಂದ ಸೋತಪನ್ನರಾಗುವ ಸಂಭವವಿದೆ. ಈ ಧ್ಯಾನವು ಕಾಮುಕತೆಯ ನಾಶಕ್ಕೆ ಹಾಗು ಭಯದ ನಿಮರ್ೂಲನೆಗೆ ಅತ್ಯಂತ ಸಹಕಾರಿಯಗಿದೆ. ಈ ಧ್ಯಾನಗಳಿಗೆ ಸ್ಮಶಾನದ ಧ್ಯಾನ ಎಂತಲೂ ಕರೆಯುತ್ತಾರೆ.

ಅಶುಭ ಧ್ಯಾನಗಳು 10 ಇವೆ. ಅವು ಯಾವುವೆಂದರೆ :

1. ಉಬ್ಬಿದ ಅಥವಾ ಊದಿರುವ ಶವದ ಅಶುಭಾ ಧ್ಯಾನ
2. ನೀಲಿಗಟ್ಟಿದ ಶವದ ಅಶುಭಾ ಧ್ಯಾನ
3. ಕೀವುಗಟ್ಟಿ ಕೊಳೆತ ಶವದ ಅಶುಭಾ ಧ್ಯಾನ
4. ತುಂಡಾದ ಶವದ ಅಶುಭಾ ಧ್ಯಾನ
5. ಪ್ರಾಣಿಗಳು ಕಚ್ಚಿ ತಿಂದಿರುವ ಶವದ ಅಶುಭಾ ಧ್ಯಾನ
6. ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾ ಧ್ಯಾನ
7. ಕತ್ತರಿಸಿ ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾ ಧ್ಯಾನ
8. ರಕ್ತಸಿಕ್ತ ಶವದ ಅಶುಭಾ ಧ್ಯಾನ
9. ಕ್ರಿಮಿಗಳಿಂದ ಆವೃತವಾಗಿರುವ ಶವದ ಅಶುಭಾ ಧ್ಯಾನ
10. ಅಸ್ತಿ ಪಂಜರದ ಶವದ ಅಶುಭಾ ಧ್ಯಾನ
ಈ ಶವಗಳ ಧ್ಯಾನವು ಈಗಿನ ಕಾಲಕ್ಕೆ ಮೊದಲು ಸಾಮಾಜಿಕವಾಗಿ ಬಹಳ ತೊಂದರೆಗಳು ಉಂಟಾಗುತ್ತದೆ. ಹಿಂದಿನ ಕಾಲದಲ್ಲೂ ಸಹಾ ಸಾಧಕರು ತೊಂದರೆಗೆ ಬಿದ್ದಿರುವುದು ಉಂಟು. ಆದರೂ ಸಾಧಕರು ಇಚ್ಛಿಸಿದರೆ ಶವಾಗಾರದಲ್ಲಿ ಅಪ್ಪಣೆ ಪಡೆದು ಮಾಡಬಹುದು. ಈ ಸಾಧನೆಯು ಪ್ರಾರಂಭದಲ್ಲಿ ಶವವಿರುವ ಕಡೆ ಅಥವಾ ಸ್ಮಶಾನದಲ್ಲಿ ಮಾಡಬೇಕಾಗುತ್ತದೆ. ಆಗ ಪ್ರಾಣಿಗಳಿಂದ ಆಕ್ರಮಣವಾಗಬಹುದು. ಅದಕ್ಕಾಗಿ ಕೋಲು ತೆಗೆದುಕೊಂಡು ಹೋಗಬೇಕಾಗುತ್ತದೆ. ಪುರಾತನ ಗ್ರಂಥಗಳ ಪ್ರಕಾರ ಪ್ರೇತಗಳು ಕಾಣಿಸಬಹುದು. ಅದಕ್ಕೆ ನಿಭರ್ಿತಿ ಹೊಂದಿರಬೇಕು ಮತ್ತು ಕಳ್ಳರು, ಕೊಲೆಗಾರರು, ಜೂಜುಕೋರರು ಇತ್ಯಾದಿ ಅನೀತಿ ಕೆಲಸ ಮಾಡುವವರು ಅಲ್ಲಿದ್ದು ಅವರ ಅಪರಾಧ ನಿರಪರಾಧಿ ಸಾಧಕನ ಮೆಲೆ ಬರಬಹುದು. ಆದ್ದರಿಂದ ದೂರದೃಷ್ಟಿಯಿಂದ ಯೋಚಿಸಿ ಸಾಧಕ ಸಾಧನೆ ಮಾಡಬೇಕಾಗುತ್ತದೆ.
ಆದ್ದರಿಂದ ಅಧಿಕಾರಿಗಳ ಅಪ್ಪಣೆ ಹಾಗು ವಿಹಾರದಲ್ಲಿ ಮೊದಲೇ ಹೇಳಿ ಹೋಗಬೇಕು. ಇದರಿಂದ ಸಹಾಯವಾಗುತ್ತದೆ. ಒಬ್ಬರೇ ಹೋಗಿ ಸಾಧನೆ ಮಾಡಬೇಕು.
ವಿರುದ್ಧ ಲಿಂಗಿಯರ (ಪುರುಷರು ಸ್ತ್ರೀಯರ ಶವ ಸ್ತ್ರೀಯರು ಪುರುಷರ ಶವ) ಹೊಸ ಶವವು ಸಹಾ ಪ್ರಮಾದಕಾರಿಯಾಗಿರುತ್ತದೆ. ಇದು ಪವಿತ್ರ ಜೀವನಕ್ಕೆ ಧಕ್ಕೆ ಉಂಟಾಗಬಹುದು. ಆದರೆ ಧ್ಯಾನಿಯು ದೃಢಸಂಕಲ್ಪವಾಗಿದ್ದರೆ ತನ್ನ ಮೇಲೆ ಅಪಾರ ಶ್ರದ್ಧೆಯಿದ್ದರೆ ನನಗೆ ಇದು ಕಷ್ಟವಾಗಲಾರದು ಎಂದು ಭಾವಿಸುವವನಾಗಿದ್ದರೆ ಮುಂದುವರಿಯಬಹುದು.
ಆದರೂ ಸಹಾ ಅಶುಭ ಬದಲು ತಪ್ಪುರೀತಿಯ ಆನಂದದ ಆಸ್ವಾದನೆಗೆ ಕೆಲವರು ಬಳಸಬಹುದೆಂದು ನಿಷೇಧಿಸಲಾಗಿದೆ.

1. ಉಬ್ಬಿದ ಶವದ ಅಶುಭಾ ಧ್ಯಾನ :


ಇಲ್ಲಿ ಸಾಧಕ ಹಿರಿಯರ ಅಪ್ಪಣೆ ಪಡೆದು ತಾನು ಈ ಸ್ಮಶಾನದಲ್ಲಿ ಸಾಧನೆ ಮಾಡುತ್ತೇನೆ ಎಂದು ತಿಳಿಸಿ ಒಂಟಿಯಾಗಿ ಸ್ಮಶಾನದಲ್ಲಿ ಬರಬೇಕು. ಅತ್ಯಂತ ಏಕಾಗ್ರತೆಯಿಂದ ಕೂಡಿರಬೇಕು. ತಾನು ಹೋಗುತ್ತಿರುವ ದ್ವಾರ, ಮಾರ್ಗ ಎಲ್ಲವನ್ನು ನೆನಪಿಟ್ಟಿರಬೇಕು. ನಂತರ ಶವದ ಸುತ್ತಲು ಇರುವ ಪರಿಸರವನ್ನು ಸಹಾ ನೆನಪಿಡಬೇಕು. ಏಕೆಂದರೆ ಇವೆಲ್ಲಾ ಸಮಾಧಿಗೆ ಸಹಕಾರಿಯಾಗುತ್ತದೆ. ಆತ ಪುರುಷನಾಗಿದ್ದರೆ ಸ್ತ್ರೀಯ ಶವದ ಬಗ್ಗೆ ಧ್ಯಾನ ಮಾಡಬಾರದು. ಅಥವಾ ಸ್ತ್ರೀಯಾಗಿದ್ದರೆ ಪುರುಷ ಶವದ ಬಗ್ಗೆ ಧ್ಯಾನ ಮಾಡಬಾರದು. ಏಕೆಂದರೆ ಇದರಿಂದ ಕಾಮವು ಜಾಗೃತವಾಗಬಹುದು. ಆದ್ದರಿಂದ ಪುರುಷರು, ಪುರುಷರ ಶವವನ್ನು, ಸ್ತ್ರೀಯರು ಸ್ತ್ರೀಯರ ಶವವನ್ನೇ ಆಯ್ಕೆಮಾಡಬೇಕು.
ಶವದ ಸುತ್ತಲು ಇರುವ ಕಲ್ಲುಗಳು, ಬಂಡೆಗಳು, ಬಳ್ಳಿಗಳು, ಹುತ್ತಗಳು, ಪೆೊದೆಗಳು, ಗಿಡಗಳು ಮತ್ತು ಮರಗಳನ್ನು ಸಹಾ ಆತನು ನೆನಪಿಡಬೇಕು. ಏಕೆಂದರೆ ಇವೆಲ್ಲಾ ಧ್ಯಾನಕ್ಕೆ ಸಹಕಾರಿಯಾಗಿರುತ್ತದೆ. ನಂತರ ಆತನು ಉಬ್ಬಿದ ಶವದ ಹತ್ತಿರ ಬಂದು ಧ್ಯಾನಿಸಬೇಕಾಗುತ್ತದೆ. ಶವದ ಅತಿ ಹತ್ತಿರವೂ ಬರಬಾರದು ಹಾಗು ತುಂಬಾ ದೂರವು ಇರಬಾರದು. ಏಕೆಂದರೆ ಧ್ಯಾನದ ವಸ್ತುವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕಾಲ ಬಳಿ ಅಥವಾ ತಲೆಯ ಬಳಿ ನಿಲ್ಲಬಾರದು. ಏಕೆಂದರೆ ಶವವು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಶವದಿಂದ ವಾಸನೆ ಬರುತ್ತಿದ್ದರೆ ಗಾಳಿಗೆ ವಿರುದ್ಧ ದಿಕ್ಕನ್ನಾಗಲಿ ಅಥವಾ ಗಾಳಿಯ ದಿಕ್ಕಿನಲ್ಲಾಗಲಿ ನಿಲ್ಲಬಾರದು. ಏಕೆಂದರೆ ಆ ವಾಸನೆಯಿಂದ ತಲೆ ತಿರುಗುವ ಅನುಭವವಾಗಬಹುದು. ನಾನು ಎಂಥಹ ಸ್ಥಳಕ್ಕೆ ನಾನು ಬಂದುಬಿಟ್ಟೆನಲ್ಲ ಎಂದು ಅನಿಸುತ್ತದೆ. ಆದ್ದರಿಂದ ವಾಸನೆಯಿಲ್ಲದ ಕಡೆ ನಿಲ್ಲಬೇಕು. ತುಂಬಾ ಹತ್ತಿರದಲ್ಲೂ ನಿಲ್ಲಬಾರದು. ಕೆಲವೊಮ್ಮೆ ಹೆದರಿಕೆಯಾಗಬಹುದು.
ನಂತರ ಆತನು 2 ಅಥವಾ 3 ದಿನದ ಶವವನ್ನು ದಿಟ್ಟಿಸುತ್ತಾ ನೋಡಬೇಕು. ನೋಡುತ್ತಾ ಆತನು ಚಿಹ್ನೆಯನ್ನು ಪಡೆಯಬೇಕು. ಚಿಹ್ನೆಯನ್ನು 11 ರೀತಿಯಲ್ಲಿ ಪಡೆಯಬಹುದು.
1. ವರ್ಣ : ವರ್ಣವನ್ನು ನೋಡುವುದರಿಂದ ಈ ಬಣ್ಣದ ಶವವೆಂದು ಮನದಲ್ಲಿ ಆಕೃತಿ ಮೂಡುತ್ತದೆ.
2. ಗುರುತು : ಪುರುಷ ದೇಹವೆಂದು ಗುರುತಿನಿಂದ ಅಥವಾ ಇಂತಹ ವಯಸ್ಸಿನ ಶವವೆಂದು ಗುರುತು ಪಡೆಯುತ್ತಾ ಮನದಲ್ಲಿ ಆಕೃತಿ ಮೂಡಿಸಬಹುದು.
3. ಆಕಾರ : ಶವದ ಆಕಾರ ಈ ರೀತಿ ಇದೆ. ಈ ರೀತಿಯ ಅಂಗಗಳು ಇವೆ ಎಂದು ಮನದಲ್ಲಿ ಆಕೃತಿ ಮೂಡಿಸಬಹುದು.
4. ದಿಕ್ಕು : ಶವವು ಈ ದಿಕ್ಕಿನಲ್ಲಿದೆ. ಆದ್ದರಿಂದ ಈ ರೀತಿ ಕಾಣುತ್ತದೆ ಎಂದು ಮನದಲ್ಲಿ ಆಕೃತಿ ಮೂಡಿಸಬಹುದು.
5. ಸ್ಥಳ : ಶವದ ಕೈ ಇಂಥಹ ಕಡೆಗೆ ಇದೆ. ತಲೆಯು ಇಂತಹ ಕಡೆಯಿದೆ ಎಂದು ಮನದಲ್ಲಿ ಆಕೃತಿ ಮೂಡಿಸಬಹುದು.
6. ಎಲ್ಲೆ : ಶವವು ಇಲ್ಲಿಂದ ಎಲ್ಲಿಯವರೆಗೆ ಕಾಣುತ್ತಿದೆ ಎಂದು ಉಬ್ಬಿದ ಚಿತ್ರವನ್ನು ಮನದಲ್ಲಿ ಆಕೃತಿ ಮೂಡಿಸಬಹುದು.
7. ಕೀಲುಗಳು : ಶವದ ಕೀಲುಗಳ ಕಡೆ ಈ ರೀತಿ ಉಬ್ಬಿದೆ ಎಂದು ಆಕೃತಿ ಮೂಡಿಸಬಹುದು.
8. ರಂಧ್ರಗಳು : ಶವದಲ್ಲಿ ಇಂತಿಂಥ ಕಡೆ ರಂಧ್ರವು ತೆರೆದಿದೆ ಎಂದು ಆಕೃತಿ ಮೂಡಿಸಬಹುದು.
9. ತಗ್ಗುಗಳು : ಶವದ ಕಣ್ಣು ತಗ್ಗಿಹೋಗಿದೆ.
10. ಉಬ್ಬು ಭಾಗ : ಶವದ ಮುಖವು ಉಬ್ಬಿದೆ, ಹೊಟ್ಟೆಯು ಊದಿದೆ ಎಂದು.
11. ಇಡೀ ಶರೀರ : ಇಡೀ ಶವವು ಉಬ್ಬಿದೆ, ವಿಕಾರವಾಗಿ ಕಾಣುತ್ತಿದೆ. ನನ್ನ ಶರೀರವು ಹೀಗೆ ಆಗಬಹುದು ಎಂದು ಆರಿಯುತ್ತ ಶವವನ್ನೇ ತದೇಕವಾಗಿ ದಿಟ್ಟಿಸುತ್ತಾ ಊದಿದ/ಉಬ್ಬಿದ ಅಶುಭ ಶವ ಎಂದು ಗ್ರಹಿಸುತ್ತಾ ನಿರಂತರ ಗಮನ ನೀಡಬೇಕು. ನೂರುಬಾರಿ ಅಥವಾ ಸಾವಿರ ಬಾರಿ ಮನಸ್ಸಿನಲ್ಲಿ ಅಚ್ಚು ಮೂಡಿಸಬೇಕು. ಈ ರೀತಿ ನಿರಂತರ ಮಾಡಿದಾಗ ಆತನು ಕಣ್ಣು ಮುಚ್ಚಿದ್ದರೂ ಶವವು ಸ್ಪಷ್ಟವಾಗಿ ಕಾಣುತ್ತದೆ. ಈ ರೀತಿ ಕಲ್ಪಿತ ಚಿಹ್ನೆಯನ್ನು ಪಡೆದ ನಂತರ ಆತನು ತನ್ನ ವಾಸಸ್ಥಳಕ್ಕೆ ಹಿಂತಿರುಗಬೇಕು. ನಂತರ ತನ್ನ ವಾಸಸ್ಥಳದಲ್ಲಿ ಮುಂದುವರೆಸಬೇಕು.
ಅಪಾಯದ ಉಗ್ಗಹ ನಿಮಿತ್ತ : ಏನೆಂದರೆ ಆತ ಧ್ಯಾನಿಸುವಾಗ ಆತನು ತೆರೆದ ಕಣ್ಣಿನ (ಮುಚ್ಚಿದ ಕಣ್ಣಿನ) ಶವವನ್ನೇ ಧ್ಯಾನಿಸಿದರೆ ಆ ಶವವು ಈತನನ್ನು ನೋಡಿದಂತೆ ಭ್ರಮೆ ಉಂಟಾಗುತ್ತದೆ. ಅಥವಾ ಅಲ್ಲಾಡಿದಂತೆ ಅಥವಾ ಎದ್ದುಬಂದಂತೆ ಭಾಸವಾಗುತ್ತದೆ. ಇವೆಲ್ಲಾ ಉಗ್ಗಹ ನಿಮಿತ್ತ ಆಗಿದೆ. (ವಶೀಕೃತ ಚಿಹ್ನೆ). ಆಗ ಆತನು ಲವಲೇಶವೂ ಭೀತವಾಗದೆ ಶಾಂತತೆಯಿಂದ, ಉಲ್ಲಾಸದಿಂದ, ಧ್ಯಾನ ಮುಂದುವರೆಸಬೇಕು. ಇಲ್ಲದಿದ್ದರೆ ಆತನ ಭಯವು ಮಿತಿಮೀರಿ ಆತನು ಕೂದಲು ನಿಮಿರುವಷ್ಟು ಭಯಭೀತನಾಗಬಹುದು. ಅಥವಾ ಧ್ಯಾನ ಶಕ್ತಿಯನ್ನೆಲ್ಲಾ ಧ್ಯಾನ ಸ್ಥಿತಿಯನ್ನು ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ನಿಯಂತ್ರಣಕ್ಕೊಳಪಡದಿದ್ದರೆ ಭೀತ ವ್ಯಕ್ತಿತ್ವದವನಾಗಲು ಸಂಭವವಿರುತ್ತದೆ. ಇಡೀ ಧ್ಯಾನಗಳಲ್ಲಿ ಅತ್ಯಂತ ಭೀಕರವೆಂದರೆ ಈ 10 ಅಶುಭ ಧ್ಯಾನಗಳೇ ಆಗಿವೆ. ಏಕೆಂದರೆ ಪ್ರತಿ ಅಶುಭಾ ಧ್ಯಾನದ ಉಗ್ಗಹ ನಿಮಿತ್ತವು ಅತ್ಯಂತ ಭೀಕರ, ಭಯಾನಕ ಮತ್ತು ಪೈಶಾಚಿಕ ಆಕೃತಿಗಳನ್ನು ಆತನು ನೋಡಬೇಕಾಗುತ್ತದೆ.

ಪರಿಹಾರ : ಇಲ್ಲಿ ಭಿಕ್ಷುವು ಧೈರ್ಯವನ್ನು ದೃಢವಾಗಿಟ್ಟು, ಶಾಂತತೆಯಿಂದ ಮತ್ತು ಶ್ರದ್ಧೆಯಿಂದ ಕೂಡಿರಬೇಕು. ಆತನು ಈ ರೀತಿ ಯೋಚಿಸಬೇಕು. ಯಾವ ಶವವೇ ಆಗಲಿ, ಮೇಲಕ್ಕೆ ಏಳುವುದಿಲ್ಲ, ಬಳ್ಳಿಯಿಂದಲೂ ಕಲ್ಲಿನ ಜಾರುವಿಕೆಯಿಂದಲೂ ಹೀಗೆ ಆಗುತ್ತಿದೆ ಮತ್ತು ಈ ಆಕೃತಿಗಳೆಲ್ಲಾ ನನ್ನ ಮನಸ್ಸಿನಿಂದ ಸೃಷ್ಟಿಯಾಗಿವೆ ಹೊರತು ನೈಜ್ಯವಲ್ಲ, ಇಂದು ನಿನ್ನ ಧ್ಯಾನ ವಸ್ತು ಕಾಣಿಸುತ್ತಿದೆ. ಓ ಭಿಕ್ಷು ಹೆದರಬೇಡ ಎಂದು ಚಿಂತಿಸುತ್ತಾ ಆ ಆಕೃತಿಗಳ ಬಗ್ಗೆ ನಕ್ಕು ಉಗ್ಗಹ ನಿಮಿತ್ತದ ಕಡೆ ಧ್ಯಾನಿಸಬೆಕು.

ಪತಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ):

 ನಂತರ ಆತನು ಧ್ಯಾನವನ್ನು ಮುಂದುವರೆಸಿದಾಗ, ಒಂದುವೇಳೆ ವಶೀಕೃತ ಚಿಹ್ನೆ ಮರೆತರೆ, ಆತನು ಪ್ರಾರಂಭದಿಂದಲೂ ಆತನು ಸ್ಮಶಾನ ಪ್ರವೇಶಿಸಿದ್ದು ಉಗ್ಗಹನಿಮಿತ್ತ ಕಾಣಿಸಿದ್ದು ತನಕ ನೆನಪಿಸಿಕೊಳ್ಳಬೇಕು. ಆಗ ಮತ್ತೆ ಉಗ್ಗಹ ನಿಮಿತ್ತ ಕಾಣಿಸಿದ ತಕ್ಷಣ ಅದರಲ್ಲೆ ಮನಸ್ಸನ್ನು ನೆಟ್ಟು ಧ್ಯಾನಿಸಬೇಕು. ಉಗ್ಗಹ ನಿಮಿತ್ತವು ಭೀಕರವಾಗಿರುವಂತೆ ಕಾಣುತ್ತದೆ. ನಂತರ ಅದರಿಂದ ಪತಿಭಾಗ ನಿಮಿತ್ತವು ಉದಯಿಸುತ್ತದೆ. ಈ ಪ್ರತಿಫಲಿತ ಚಿಹ್ನೆ ನೋಡಲು ದಪ್ಪ ದಪ್ಪನೆಯ ಉಬ್ಬಿದ ಶರೀರಧಾರಿ ಮಲಗಿದಂತೆ ಕಾಣಿಸುತ್ತದೆ. ಈ ರೀತಿಯ ಪ್ರತಿಫಲಿತ ಚಿಹ್ನೆ ಕಾಣಿಸಿದ ಕ್ಷಣದಲ್ಲೇ ಕಾಮುಕತೆಯು ನಾಶವಾಗುತ್ತದೆ. ಆತ ಪ್ರತಿ ಶರೀರದಲ್ಲಿ ಈ ಪ್ರತಿಭಾಗ ನಿಮಿತ್ತ ಕಂಡು ಅಸಹ್ಯಪಡುವವನಾಗುತ್ತಾನೆ. ಹಾಗೆಯೇ ಜೊತೆಗೆ ದ್ವೇಷವು ಅಳಿಯುತ್ತದೆ. ಹೇಗೆಂದರೆ ರಕ್ತದ ಜೊತೆ ಕೀವು ಹೊರಬಂದಂತೆ ಆತನಲ್ಲಿ ರಾಗ ದ್ವೇಷ ಎರಡೂ ನಾಶವಾಗುತ್ತದೆ. ಆತನ ಪರಿಶ್ರಮದಿಂದಾಗಿ ಜಡತೆ, ನಿದ್ದೆ, ಸೋಮಾರಿತನವು ನಾಶವಾಗುತ್ತದೆ. ಪ್ರತಿಭಾಗ ನಿಮಿತ್ತದಲ್ಲಿ ಉದಯಿಸಿದ ಶಾಂತತೆಯಿಂದಾಗಿ ಚಿಂತೆ, ಅವಿಶ್ರಾಂತಿಗಳು ಅಳಿಯುತ್ತದೆ. ಧ್ಯಾನದ ಯಾವ ಸಂಶಯವೂ ಇಲ್ಲದೆ ಆತನ ಪಂಚ ನಿವರಣಗಳು ಅಂತ್ಯವಾಗುತ್ತದೆ. ಧ್ಯಾನಂಗಗಳು ಕೂಡಿ ಸಾಮಿಪ್ಯ ಸಮಾಧಿ ಪಡೆಯುತ್ತಾನೆ.
ಪ್ರಥಮ ಸಮಾಧಿ : ಹೀಗೆ ಅವನಲ್ಲಿ ಪಂಚನಿವರಣಗಳು ನಿವಾರಣೆಯಾಗಿ ಸಾಮಿಪ್ಯ ಸಮಾಧಿಯು ಮುಂದುವರೆದಂತೆ ದೇಹ ಮತ್ತು ಮನಸ್ಸು ಆನಂದಿತವಾಗಿ, ಶಾಂತವಾಗಿ, ಹಾಗೆಯೇ ಪ್ರಬಲ ಏಕಾಗ್ರತೆಯು ಸ್ಥಾಪಿತವಾಗುತ್ತದೆ. ಆಗ ಆತನು ಅವಿಚಲ ಪ್ರಥಮ ಸಮಾಧಿ ಹೊಂದುತ್ತಾನೆ.
ಈ ಧ್ಯಾನವು ಆಕಾರಗಳಲ್ಲಿ ಆನಂದಿಸುವ ಕಾರ್ಯಪ್ರವೃತ್ತಿವುಳ್ಳವನಿಗೆ ಅತ್ಯಂತ ಸಹಕಾರಿಯಾಗುತ್ತದೆ. ಈ ಧ್ಯಾನದಿಂದ ದೇಹದ ಆಕಾರಗಳಲ್ಲಿ ಅಸಹ್ಯತೆ ಮೂಡುತ್ತದೆ. ಈ ಧ್ಯಾನವು ವಿತಕ್ಕ ವಿಚಾರವನ್ನು ಹೊಂದಿರುವುದರಿಂದ ಇದು ಪ್ರಥಮ ಸಮಾಧಿಗೆ ನಿಲ್ಲುತ್ತದೆ. ಇಲ್ಲಿಂದ ವಿಪಶ್ಶನ ವೃದ್ಧಿಗೆ ಸೋತಪನ್ನ ಸ್ಥಿತಿಗೆ ತಲುಪಬಹುದು.

ಅಶುಭ ಧ್ಯಾನ ಲಾಭಗಳು :

1. ಸಾಧಕನಲ್ಲಿ ಕಾಮುಕತೆ ಅಳಿಯುತ್ತದೆ.
2. ಸಾಧಕನಲ್ಲಿ ಭೀತಿಯು ಅಳಿಯುತ್ತದೆ.
3. ಸ್ಮೃತಿಯು ವೃದ್ಧಿಯಾಗುತ್ತದೆ.
4. ಶರೀರದ ಬಗ್ಗೆ ಅಶುಭ ಅರಿವನ್ನು ಪಡೆಯುತ್ತಾರೆ.
5. ಮುಂದೆ ಅನಿತ್ಯ ದುಃಖ ಮತ್ತು ಅನಾತ್ಮ ಅರಿವು ಪಡೆಯುತ್ತಾರೆ.
6. ಶರೀರದ ಆಸಕ್ತಿ ಹೊರಟು ಹೋಗುತ್ತದೆ.
7. ಸೋತಪನ್ನ ಸ್ಥಿತಿಗೆ ಹತ್ತಿರವಾಗುತ್ತಾರೆ.
ಇಲ್ಲಿಗೆ ಊದಿದ ಶವದ ಅಶುಭಾ ಧ್ಯಾನ ಮುಗಿಯಿತು.

2. ನೀಲಿಗಟ್ಟಿದ ಶವದ ಅಶುಭಾ ಧ್ಯಾನ :

ಈ ಧ್ಯಾನವು ಶರೀರದ ವರ್ಣದಲ್ಲಿ ಆಸಕ್ತರಾದ ಲೋಭಿಗಳಿಗೆ ಸೂಕ್ತವಾದುದು. ಇಲ್ಲಿ ಧ್ಯಾನದ ವಿಧಾನಗಳು ಮತ್ತು ಲಾಭಗಳು ಎಲ್ಲಾ ಉಬ್ಬಿದ ಶವದ ಅಶುಭ ಧ್ಯಾನದಂತೆಯೇ ಇರುತ್ತದೆ. ಆದರೆ ಇಲ್ಲಿ 3 ಅಥವಾ 4 ದಿನ ಹಳೆಯ ಬಣ್ಣಗೆಟ್ಟ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ಉಗ್ಗದ ನಿಮಿತ್ತವು ಬಣ್ಣಗಳ ಮಚ್ಚೆಯಂತೆ ಕಾಣಿಸುತ್ತದೆ.
ಆದರೆ ಪತಿಭಾಗ ನಿಮಿತ್ತವು ಪ್ರಬಲ ವರ್ಣದಿಂದ ಗೋಚರಿಸುತ್ತಿದೆ. ಈ ಧ್ಯಾನದಿಂದ ವರ್ಣದ ಮೇಲೆ ಅಸಹ್ಯ ಮೂಡುತ್ತದೆ.

3. ಕೀವುಗಟ್ಟಿ ಕೊಳೆತ ಶವದ ಅಶುಭಾ ಧ್ಯಾನ : 



ಇಲ್ಲಿ 4 ಅಥವಾ 5 ದಿನದ ಕೀವು ಸ್ರವಿಕೆಯ ಕೊಳೆತ ಶವವನ್ನು ಧ್ಯಾನಕ್ಕೆ ಆಯ್ಕೆ ಮಾಡಬೇಕಾಗುತ್ತದೆ. ಈ ಧ್ಯಾನವು ಸುವಾಸನೆ, ಹಾಗು ಸುಗಂಧ ದ್ರವಗಳಲ್ಲಿ ಆಸಕ್ತರಾದ ವ್ಯಕ್ತಿಗಳಿಗೆ ಸೂಕ್ತವಾದುದು. ಈ ಧ್ಯಾನದಿಂದ ಕೊಳೆಯುವಿಕೆಯ ಅಸಹ್ಯತೆ ಉಂಟಾಗುತ್ತದೆ. ಇಲ್ಲಿ ಉಗ್ಗಹ ನಿಮಿತ್ತವು ಸ್ರವಿಕೆಯಿಂದ ಕೂಡಿದ ಚಿಹ್ನೆಯಾಗಿದ್ದರೆ ಪತಿಭಾಗ ನಿಮಿತ್ತವು ಅಚಲ ಮತ್ತು ಶಾಂತವಾಗಿರುತ್ತದೆ. ಇದರ ಧ್ಯಾನ ವಿಧಾನ ಮತ್ತು ಲಾಭಗಳು ಉಬ್ಬಿದ ಧ್ಯಾನದಂತೆ ಇರುತ್ತದೆ.

4. ತುಂಡಾದ (ಸೀಳಿದ) ಶವದ ಅಶುಭ ಧ್ಯಾನ :


ಇದಕ್ಕೆ ಬೇಕಾದ ಧ್ಯಾನ ವಿಷಯವು ಯುದ್ಧರಂಗದಲ್ಲಿ ತುಂಡಾಗಿರುವ ಶವದಲ್ಲಿ ಸಿಗುತ್ತದೆ. ಈ ಧ್ಯಾನದಿಂದ ಕತ್ತರಿಸುವಿಕೆಯ ಅಸಹ್ಯ ಮೂಡುತ್ತದೆ. ಈ ಧ್ಯಾನದಲ್ಲಿ ಉಗ್ಗಹ ನಿಮಿತ್ತವು ಕತ್ತಿರಿಸಿದಂತೆ ಕಾಣುತ್ತದೆ. ಹಾಗು ಪ್ರತಿಭಾಗ ನಿಮಿತ್ತವು ಪೂರ್ಣವಾಗಿ ಕಾಣುತ್ತದೆ. ಧ್ಯಾನ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆ ಇರುತ್ತದೆ.

5. ಪ್ರಾಣಿಗಳು ಕಚ್ಚಿ ತಿಂದಿರುವ ಶವದ ಅಶುಭ ಧ್ಯಾನ :

 


ಈ ಧ್ಯಾನಕ್ಕೆ ಪ್ರಾಣಿಗಳು ಕಚ್ಚಿ ತಿಂದಿರುವ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಧ್ಯಾನವು ಶರೀರದ ಅಂಗಗಳಲ್ಲಿ ಆಸಕ್ತರಾದ ಕಾಮುಕರಿಗೆ ಸೂಕ್ತವಾದುದು. ಈ ಧ್ಯಾನದಲ್ಲಿ ಉಗ್ಗಹ ನಿಮಿತ್ತವು ಅಲ್ಲಿ ಅಥವಾ ಇಲ್ಲಿ ಕಚ್ಚಿರುವಂತೆ ಕಂಡರೆ, ಪ್ರತಿಭಾಗ ನಿಮಿತ್ತದಲ್ಲಿ ಪೂರ್ಣವಾಗಿ ಕಾಣಿಸುತ್ತದೆ. ಈ ಧ್ಯಾನದಿಂದ ಅಂಗಗಳ ಬಗ್ಗೆ ಅಸಹ್ಯತೆ ಮೂಡುತ್ತದೆ. ಈ ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.

6. ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾ ಧ್ಯಾನ : 



ಈ ಧ್ಯಾನಕ್ಕೆ ಚಿಕ್ಕ ಚಿಕ್ಕ ತುಂಡುಗಳಾಗಿ ಚೆಲ್ಲಾಪಿಲ್ಲಿ ಯಾಗಿರುವ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಧ್ಯಾನವು ಅಂಗಾಗಗಳಲ್ಲಿ ಅಹಂಕಾರವನ್ನು ಹೊಂದಿದ ವ್ಯಕ್ತಿಗೆ ಸೂಕ್ತವಾದುದು. ಈ ಧ್ಯಾನದಲ್ಲಿ ಉಗ್ಗಹ ನಿಮತ್ತವು ಬಿರುಕು ಬಿರುಕಾಗಿ ಕಾಣಿಸುತ್ತದೆ. ಆದರೆ ಪತಿಭಾಗ ನಿಮಿತ್ತವು ಪೂರ್ಣವಾಗಿ ಕಾಣಿಸುತ್ತದೆ. ಈ ಧ್ಯಾನದಿಂದ ಅಂಗಾಂಗಗಳ ಬಗ್ಗೆ ಅಸಹ್ಯತೆ ಮೂಡುತ್ತದೆ. ಈ ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಇರುತ್ತದೆ.

7. ಕತ್ತರಿಸಿ ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾ ಧ್ಯಾನ :


ಇಲ್ಲಿ ಖಡ್ಗದಿಂದ ಕತ್ತರಿಸಲ್ಪಟ್ಟು ಚೆಲ್ಲಾಪಿಲ್ಲಿಯಾಗಿರುವ ಶವದ ಆಯ್ಕೆ ಮಾಡಬೇಕು. ಈ ಧ್ಯಾನವು ಚೆನ್ನಾಗಿರುವ ದೇಹದ ಆಸಕ್ತಿ ಹೊಂದಿರುವವನಿಗೆ ಸೂಕ್ತವಾದುದು. ಈ ಧ್ಯಾನದ ಉಗ್ಗಹ ನಿಮಿತ್ತವು ಛಿದ್ರವಾಗಿರುವ ಗಾಯಗಳಂತೆ ಕಾಣುತ್ತದೆ. ಆದರೆ ಪತಿಭಾಗ ನಿಮಿತ್ತವು ಪೂರ್ಣವಾಗಿ ಕಾಣುತ್ತದೆ. ಈ ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.


8. ರಕ್ತ ಕಲೆಗಳ ಶವದ ಅಶುಭಾ ಧ್ಯಾನ


ಇಲ್ಲಿ ರಕ್ತಸಿಕ್ತವಾದ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂದರೆ ರಕ್ತ, ಹರಿದ, ರಕ್ತ ತೊಟ್ಟಿಕ್ಕುತ್ತಿರುವ ಶವವನ್ನು ಧ್ಯಾನಿಸಬೇಕಾಗುತ್ತದೆ. ಈ ಧ್ಯಾನವು ಆಭರಣಗಳ ಆಸಕ್ತನಿಗೆ ಸೂಕ್ತವಾದುದು. ಇಲ್ಲಿ ಉಗ್ಗಹ ನಿಮಿತ್ತವು ಚಲಿಸುತ್ತಿರುವ ಕೆಂಪು ದ್ರವದಂತೆ ಕಾಣಿಸುತ್ತದೆ. ಆದರೆ ಪತಿಭಾಗ ನಿಮಿತ್ತವು ಶಾಂತವಾಗಿರುತ್ತದೆ. ಈ ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.


9. ಕ್ರಿಮಿಗಳಿಂದ ಆವೃತವಾದ ಅಶುಭಾ ಧ್ಯಾನ :



  ಇಲ್ಲಿ ಹಳೆಯ ಶವಕ್ಕೆ ಕ್ರಿಮಿಗಳು ಆವೃತವಾಗಿ ನವರಂಧ್ರಗಳಲ್ಲಿ ಚಲಿಸುತ್ತಾ, ಹಾಗೆಯೇ ಇಡೀ ಶರೀರವನ್ನು ಆವರಿಸಿರುವ ಶವವನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಈ ಧ್ಯಾನವು ಶರೀರದ ಮೇಲಿನ ಅಹಂಕಾರವುಳ್ಳವನಿಗೆ ಸೂಕ್ತವಾದುದು. ಇಲ್ಲಿ ಉಗ್ಗಹ ನಿಮಿತ್ತವು ಚಲಿಸುವ ಚಿಹ್ನೆಯಿಂದ ಕೂಡಿರುತ್ತದೆ. ಆದರೆ ಪ್ರತಿಭಾಗ ನಿಮಿತ್ತವು ಬೆಂದ ಅಕ್ಕಿಯ ಮುದ್ದೆಯಂತೆ ಕಾಣಿಸುತ್ತದೆ. ಈ ಧ್ಯಾನದಿಂದ ದೇಹ ನನ್ನದು ಎಂಬ ಭಾವನೆ ದೂರವಾಗುತ್ತದೆ. ಈ ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
ಥೇರ ಚೂಲಪಿಂಡಪಾತಿಕರಿಗೆ ಆನೆಯ ಶವವನ್ನು ಕ್ರಿಮಿಗಳು, ಹುಳುಗಳು ತಿನ್ನುತ್ತಿದ್ದುದನ್ನು ಕಂಡು ನಿಮಿತ್ತವು ಉದಯಿಸಿತ್ತು.

10. ಅಸ್ತಿ ಪಂಜರದ ಅಶುಭಾ ಧ್ಯಾನ : 


ಇಲ್ಲಿ ಹೊಸ ಅಥವಾ ಹಳೆಯ ಮುರಿದ ಅಥವಾ ಪೂರ್ಣ ಅಸ್ತಿಪಂಜರವನ್ನು ಧ್ಯಾನಕ್ಕೆ ಆಯ್ಕೆ ಮಾಡಬೇಕಾಗುತ್ತದೆ. ಈ ಧ್ಯಾನವು ಹಲ್ಲುಗಳಿಗೆ ಮತ್ತು ಮೂಳೆಗಳಿಗೆ ಆಸಕ್ತನಾದವನಿಗೆ ಸೂಕ್ತವಾದುದು. ಇಲ್ಲಿ ಉಗ್ಗಹ ನಿಮಿತ್ತವು ಪೂರ್ಣವಾಗಿ ಕಾಣಿಸುತ್ತದೆ. ಈ ಧ್ಯಾನದಿಂದ ದೇಹದ ಅನಿತ್ಯ, ದುಃಖ ಮತ್ತು ಅನಾತ್ಮಗಳು ಗೋಚರವಾಗುತ್ತವೆ. ಈ ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
ಅಸ್ತಿಪಂಜರದ ಧ್ಯಾನ ಮಾಡುವವರಿಗೆ ಒಂದು ಸೂಚನೆ, ಮೂಳೆಗಳ ಬಿಳಿ ಬಣ್ಣದೆಡೆ ಗಮನಹರಿಸಕೂಡದು. ಏಕೆಂದರೆ, ಅದು ಬಿಳಿ ಕಸಿಣವಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಅಶುಭ ಗ್ರಹಿಕೆ (ಅಸಹ್ಯತೆ)ಯನ್ನು ಗಮನಕ್ಕೆ ತೆಗೆದುಕೊಳ್ಳಬೇಕು.
ಅಸ್ತಿಪಂಜರದ ಅಶುಭ ಧ್ಯಾನ ಮಾಡಿದಂತಹ ಮಹಾತಿಸ್ಸ ಥೇರರಿಗೆ ಸ್ತ್ರೀಯು ನಕ್ಕಿದ್ದಕ್ಕೆ ಆಕೆ ಅಸ್ತಿಪಂಜರದ ರೀತಿ ಗೋಚರಿಸಿದಳು.
ಇದು ದೇಹದ ಅಂತಿಮ ಅವಸ್ಥೆಯಾಗಿದೆ. ಆಗ ಶವವು ಊದುತ್ತದೆ, ನೀಲಿಗಟ್ಟುತ್ತದೆ, ಹರಿಯುತ್ತದೆ, ಪ್ರಾಣಿಗಳಿಂದ ತಿನ್ನಲ್ಪಡುತ್ತದೆ, ಕ್ರಿಮಿಗಳಿಂದ ತಿನ್ನಲ್ಪಡುತ್ತದೆ. ಶತ್ರುಗಳಿಂದ ತುಂಡು ತುಂಡಾಗುತ್ತದೆ. ರಕ್ತವೆಲ್ಲಾ ಸ್ರವಿಕೆಯಾಗುತ್ತದೆ. ಕೊನೆಗೆ ಮೂಳೆಗಳ ಹಂದರ ಉಳಿಯುತ್ತದೆ. ಹೀಗೆಯೇ ನನ್ನ ದೇಹದ ಗತಿಯೂ ಆಗುತ್ತದೆ. ಇಲ್ಲಿ ಸುಂದರವೆಂಬುದೇ ಇಲ್ಲ. ನೂರಾರು ಮೂಳೆಗಳಿಂದ ರಚಿತವಾಗಿ ಅದರ ಸುತ್ತಲು ಮಾಂಸ ಇತ್ಯಾದಿಗಳಿಂದ ಕಟ್ಟಲ್ಪಟ್ಟು ಚರ್ಮದ ಹೊದಿಕೆಯಿಂದ ದೇಹ ಹೀಗೆ ಕಾಣಿಸುತ್ತದೆ. ಕ್ರಿಮಿಗಳ ಗೂಡು, ರೋಗದ ತವರೂರು, ಮುಪ್ಪಿನ ಮನೆ, ಅಸಹ್ಯತೆಗಳ ಹುಟ್ಟುವಿಕೆಗೆ ಮೂಲಸ್ಥಾನ. ಈ ದೇಹದ ನಿಜಸ್ವರೂಪವನ್ನು ಅಶುಭಾ ಧ್ಯಾನದಲ್ಲಿ ಕಂಡವರು ಎಂದಿಗೂ ಕಾಮುಕತೆಯಲ್ಲಿ ಆಸಕ್ತಿ ತಾಳಲಾರರು? ದೇಹದ ಬಗ್ಗೆ ಅಹಂಕಾರ ತಾಳುವುದಿಲ್ಲ, ಭೀತಿ ಪಡುವುದಿಲ್ಲ. ಈ ಧ್ಯಾನ ಮಾಡಿದವನಿಗೆ ಜೀವಂತ ಶರೀರವು ಹಾಗು ಶವಕ್ಕೆ ಆತ ಬೇಧ ಕಾಣುವುದಿಲ್ಲ. ದೇಹವೆಂದರೆ ದುಃಖ, ದುಃಖವೆಂದರೆ ದೇಹವುಳ್ಳವನಾಗುವುದೇ ಎಂಬ ಜ್ಞಾನ ಸಿಗುತ್ತದೆ.
ಈ ದೇಹ ನಿರಂತರ ಬದಲಾವಣೆ ಹೊಂದುತ್ತಿರುತ್ತದೆ. ಇಲ್ಲಿ ಆತ್ಮವಿಲ್ಲ. ನನ್ನದು ಎಂಬುದು ಏನೂ ಇಲ್ಲ. ನಾನು ಎಂಬುದು ಮೊದಲೇ ಇಲ್ಲ ಎಂಬ ಯತಾರ್ಥ ಜ್ಞಾನ ಆತನಿಗೆ ಸಿಗುತ್ತದೆ.
ಈ ಹತ್ತು ಅಶುಭಗಳಲ್ಲಿ ಒಂದೇ ಲಕ್ಷಣವಿದೆ. ಅದೆಂದರೆ: ಕಶ್ಮಲಕರ, ದುವರ್ಾಸನೆಯುತ, ಅಸಹ್ಯಕರ ಹಾಗು ಹೇಸಿಗೆಕರ. ಈ ಧ್ಯಾನವು ಸಿದ್ಧಿಯಾದರೆ ಶವ ಮಾತ್ರ ಕುರೂಪವಾಗಿರುವುದಿಲ್ಲ, ಜೀವಂತ ವ್ಯಕ್ತಿಯ ಶರೀರ ಸಹಾ ಹಾಗೆಯೇ ಕಾಣಿಸುತ್ತದೆ. 
ಉದಾ: ಚೇತಿಯಾಪಬ್ಬತದಲ್ಲಿ ವಾಸಿಸುತ್ತಿದ್ದ ಥೇರ ಮಹಾತಿಸ್ಸರು ಹಾಗು ಅವರ ಶಿಷ್ಯರಾದಂತಹ ಸಂಘರಕ್ಖಿತ ಥೇರರು ಒಮ್ಮೆ ಮಹಾರಾಜರು ಆನೆಯನ್ನು ಏರಿ ಹೋಗುತ್ತಿದ್ದಂತಹ ದೃಶ್ಯ ಗಮನಿಸಿದರು. ಅವರಿಗೆ ಮಹಾರಾಜರು ಸಹ ಅಶುಭಕರವಾಗಿ ಕಂಡುಬಂದರು.
ಇದೇ ಶರೀರದ ಸ್ವರೂಪವಾಗಿದೆ, ಇದರಲ್ಲಿ 300 ಮೂಳೆಗಳು 108 ಕೀಲುಗಳೊಂದಿಗೆ ಬಂಧಿಸಲ್ಪಟ್ಟಿವೆ. 900 ಸ್ನಾಯುಗಳಿಂದ ಸುತ್ತವರೆದಿದೆ, 900 ಮಾಂಸಗಳೊಂದಿಗೆ ಕಟ್ಟಲ್ಪಟ್ಟಿದೆ. ಚರ್ಮದಿಂದ ಆವರಿಸಲ್ಪಟ್ಟು ಜೊತೆಗೆ ಎಣ್ಣೆಗ್ರಂಥಿಗಳು ಕ್ರಿಮಿಗಳು ಹೇರಳವಾಗಿದ್ದು, ರೋಗಗಳ ಗೂಡಾಗಿದೆ. ನೋವುಕಾರಕ ಸ್ಥಿತಿಗಳ ಆಧಾರವಾಗಿದೆ. ನವರಂಧ್ರಗಳಿಂದಲೂ ಹೊಲಸು ಸ್ರವಿಕೆಯಾಗುತ್ತಿರುತ್ತದೆ. ಸ್ವಚ್ಛಗೊಳಿಸುವುದರಿಂದಲೇ ಇದಕ್ಕೆ ಗೌರವ. ಇಲ್ಲದಿದ್ದರೆ ರಾಜನ ಶರೀರಕ್ಕೂ, ನಿಷ್ಕೃಷ್ಟ ಭಿಕ್ಷುವಿಗೂ ವ್ಯತ್ಯಾಸವಿರುವುದಿಲ್ಲ.
ಆದರೆ ಯಾವಾಗ ಚರ್ಮ, ಹಲ್ಲು, ಕೂದಲು, ಬಾಯಿ ಇತ್ಯಾದಿಗಳನ್ನು ಸ್ವಚ್ಛಗೊಳಿಸುವುದರಿಂದಾಗಿ ಇದರ ಸ್ವರೂಪ ಗಮನಕ್ಕೆ ಬರಲಾರದು. ಪುರುಷನು ಸ್ತ್ರೀಯಲ್ಲಿ ಹಾಗು ಸ್ತ್ರೀಯು ಪುರುಷನಲ್ಲಿ ದೇಹದ ಸ್ವರೂಪ ಸ್ಪಷ್ಟವಾಗಿ ಗಮನಿಸಿದೆ ಆನಂದಿಸುತ್ತಿರುವರು, ಜೊತೆಗೆ ವಸ್ತ್ರ, ಆಭರಣ ಹಾಗು ಅಲಂಕಾರದಿಂದ ಮುಚ್ಚುತ್ತಿರುವರು.
ದೇಹದಿಂದ ಹೊರಬೀಳುವ ಹಲ್ಲಾಗಲಿ, ಉಗುರಾಗಲಿ, ಕೂದಲಾಗಲಿ ಇತ್ಯಾದಿ ದ್ರವಿಕೆಗಳಾಗಲಿ ಹೊರಬಿದ್ದ ಮೇಲೆ ಅವನ್ನು ಮುಟ್ಟಲು ಅಸಹ್ಯಪಡುವರು. ಅಜ್ಞಾನಕ್ಕೆ ವಶವಾಗಿ ಅಶುಭವನ್ನು ಶುಭವೆಂದು ಅನಿತ್ಯವನ್ನು ನಿತ್ಯವೆಂದು, ದುಃಖವನ್ನು ಸುಖವೆಂದು, ತಮ್ಮದಲ್ಲದ್ದನ್ನು ತಮ್ಮದೆಂದು ಸಂಭ್ರಮಪಡುತ್ತಿರುವರು.
ಮೂರ್ಖರು ತಮ್ಮ ಮೂರ್ಖತ್ವದಿಂದಾಗಿ
ಶರೀರವನ್ನು ಸುಂದರವೆಂದು ಬಗೆಯುವರು.
ಹಾಗು ಮಾರನ ವಶಿಗಳಾಗಿ ನೋವಿಗೆ ಸಿಲುಕುವರು.
ಆದರೆ ಜ್ಞಾನಿಗಳು ಈ ಅಸಹ್ಯ ಶರೀರದ ಸ್ವರೂಪ ಗಮನಿಸುತ್ತಾ
ಅದು ಶವವಾಗಿರಲಿ ಅಥವಾ ಜೀವಂತವಾಗಿಯೇ ಇರಲಿ
ಸ್ಪಷ್ಟ ಅರಿವು ಅವರಲ್ಲಿ ಇದು ಅಸಹ್ಯ! ಎಂದು 
ಯಾವುದೇ ಸೌಂದರ್ಯ ಅವಿತಿಲ್ಲ ಇದರಲ್ಲಿ.
ಹೀಗಾಗಿ ಸಾಮಥ್ರ್ಯವುಳ್ಳ ಭಿಕ್ಷುವು ನಿಮಿತ್ತವನ್ನು ಎಲ್ಲೆಲ್ಲಿ ಅಶುಭವಿರುವುದೋ ಅಲ್ಲೆಲ್ಲಾ ಗ್ರಹಿಸುತ್ತಾನೆ, ಸ್ಪಷ್ಟೀಕರಿಸುತ್ತಿರುತ್ತಾನೆ. ಅದು ಶರೀರವೇ ಆಗಿರಲಿ ಅಥವಾ ಶವವೇ ಆಗಿರಲಿ ಆತನು ನಿಮಿತ್ತದಿಂದಾಗಿ ಸಮಾಧಿಗೇರುತ್ತಾನೆ.


ಸಜ್ಜನರ ಆನಂದಕ್ಕಾಗಿ ರಚಿಸಲ್ಪಟ್ಟ ವಿಶುದ್ಧಿ ಮಾರ್ಗದ 2ನೇ ಭಾಗವಾದ
ಸಮಾಧಿಯಲ್ಲಿನ 6ನೇಯ ಅಧ್ಯಾಯವಾದ ಅಶುಭ ಕಮ್ಮಟ್ಟನ ನಿದ್ದೆಸ ಮುಗಿಯಿತು 

No comments:

Post a Comment