Thursday 12 April 2018

visuddhi magga ವಿಸುದ್ದಿಮಗ್ಗದ ಅಧ್ಯಾಯ 5 ಶೇಷ ಕಸಿಣ ನಿದ್ದೇಸ (ಉಳಿದ ಕಸಿಣಗಳ ವಿವರಣೆ)

ಅಧ್ಯಾಯ 5ಶೇಷ ಕಸಿಣ ನಿದ್ದೇಸ (ಉಳಿದ ಕಸಿಣಗಳ ವಿವರಣೆ)

2. ಅಪೋ ಕಸಿಣ (ಜಲ ಕಸಿಣ ಧ್ಯಾನ):

ಅಪೋ (ಜಲ) ಕಸಿಣಾವು ಪಠವಿ ಕಸಿಣಾದ ನಂತರ ಬರುವುದು. ವಿವರಣೆ ಇಲ್ಲಿದೆ.
ಯಾರು ಜಲಕಸಿಣಾವನ್ನು ಸಿದ್ಧಿಸಲು ಇಚ್ಛಿಸುತ್ತಾರೋ ಆತನು ಆಸನಬದ್ಧನಾಗಿ ಜಲಕಸಿಣದ ಚಿಹ್ನೆಯನ್ನು ಗ್ರಹಣೆ ಮಾಡಬೇಕು. ಆ ಚಿಹ್ನೆಯು ಸಿದ್ಧಪಡಿಸಿರುವುದಾಗಲಿ ಅಥವಾ ಪ್ರಾಕೃತಿಕವಾಗಲಿ ತನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಆಯ್ಕೆಮಾಡಿ ಧ್ಯಾನವನ್ನು ಆರಂಭಿಸಬೇಕು. ಈ ಸಾಮಥ್ರ್ಯ ತಿಳಿಯುವುದು ಹೀಗೆ. ಯಾರು ಹಿಂದಿನ ಜನ್ಮಗಳಲ್ಲಿ ಈ ಜಲಕಸಿಣವನ್ನು ಆಚರಿಸಿರುತ್ತಾರೋ ಅಂತಹವರು ಕೊಳವಾಗಲಿ, ಸರೋವರವಾಗಲಿ, ಜಲಪಾತವಾಗಲಿ ಅಥವಾ ಸಮುದ್ರವಾಗಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಥೇರ ಚೂಳಸಿವ.
ಈ ಪೂಜ್ಯರು ಲಾಭ ಸತ್ಕಾರವನ್ನು ತೊರೆದು ಏಕಾಂತ ಜೀವನಕ್ಕೆ ಅರಸಿ ಬಂದನು. ಮನ್ಮಾರ್ನಿಂದ ಜಂಬೂದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣಿಸಿದನು. ಹಾಗೆ ಬರುತ್ತಿರುವಾಗ ಸಮುದ್ರವನ್ನು ದಿಟ್ಟಿಸಿದನು. ಕೆಲವೇ ನಿಮಿಷಗಳಲ್ಲೇ ಕಸಿಣದ ಪತಿಭಾಗ ನಿಮಿತ್ತವು ಜಾಗೃತವಾಯಿತು.
ಆದರೆ ಯಾರಿಗೆ ಈ ರೀತಿಯ ಹಿಂದಿನ ಜನ್ಮದ ಅಭ್ಯಾಸವಿರುವುದಿಲ್ಲವೋ ಅಂತಹವರು ಈಗ ಹಲವಾರು ತಿಂಗಳು ಅಥವಾ ವರ್ಷ ಕಾಲ ಧ್ಯಾನಿಸಬೇಕಾಗುತ್ತದೆ.
ಇಲ್ಲಿ ಭಿಕ್ಷುವು ಸಾಧನೆಗಾಗಿ ನಿಶ್ಶಬ್ದ, ನಿರ್ಜನ ಪ್ರದೇಶ ಆಯ್ಕೆ ಮಾಡಬೆಕು. ನಂತರ ಜಲಕಸಿನಾಗಾಗಿ ಪಾರದರ್ಶಕ ಬಟ್ಟಲನ್ನು ತೆಗೆದುಕೊಂಡು ಸ್ವಚ್ಛವಾದ ನೀರನ್ನು ಆಯ್ಕೆ ಮಾಡಬೇಕು. ಹಾಗು ನೀರು ವರ್ಣರಹಿತವಾಗಿರಬೇಕು. ಅಷ್ಟೇ ಅಲ್ಲದೆ ಆತನು ನೀರಿನ ಬಣ್ಣಗಳ ಬಗ್ಗೆ ಗ್ರಹಿಕೆ ಮಾಡಬಾರದು. ಬಟ್ಟಲನ್ನು 4 ಅಡಿ ದೂರದಲ್ಲಿಟ್ಟು ಪದ್ಮಾಸನದಲ್ಲಿ ಕುಳಿತು ತದೇಕ ದೃಷ್ಟಿಯಿಂದ ವಿಕ್ಷೀಸುತ್ತಾ ಅಪೋ...ಅಪೋ...ಅಪೋ... (ಅಪೋ (ನೀರು) ಅಥವಾ ಅಂಬು (ಮಳೆ), ಅಥವಾ ಉದಕ (ದ್ರವ), ಅಥವಾ ವಾರಿ (ಭಾಷ್ಪ) ಅಥವಾ ಸಲೀಲ (ದ್ರಾವಕ) ಎಂದು ಜಪಿಸುತ್ತಾ ಪಠವಿ ಕಸಿನಾದಂತೆ ಪ್ರತಿ ಹಂತವನ್ನು ದಾಟಿ ಚತುರ್ಥ ಝಾನ ಪ್ರಾಪ್ತಿಮಾಡಬೇಕು.
ಆತನಿಗೆ ಉಗ್ಗಹ ನಿಮಿತ್ತ ಚಲಿಸುವಂತೆ ಕಾಣುವುದು. ನೀರು ಬುರುಡೆಗಳಿಂದ ಕೂಡಿದ್ದರೆ, ಉಗ್ಗಹ ನಿಮಿತ್ತವು ಹಾಗೇ ಕಾಣಿಸಬಹುದು.
ಆತನಿಗೆ ಪ್ರತಿಭಾಗ ನಿಮಿತ್ತವು ಆಕಾಶದಲ್ಲಿ ಸ್ಫಣಿಕದ ಬೀಸಣಿಕೆಯಂತೆಯೂ, ಅಥವಾ ಸ್ಫಣಿಕದ ದರ್ಪಣದ ತಟ್ಟೆಯಂತೆಯೂ ಕಾಣಿಸಬಹುದು. ಅದನ್ನು ಅವಲಂಬಿಸಿಕೊಂಡು ಆತನು ಝಾನದ ಹಂತಗಳನ್ನು ದಾಟಿ ಚತುರ್ಥ ಸಮಾಧಿ ತಲುಪಬೇಕು.

3. ತೇಜೋ (ಅಗ್ನಿ) ಕಸಿನಾ ಧ್ಯಾನ







ಯಾರು ತೇಜೋ ಕಸಿಣಾವನ್ನು ಸಿದ್ಧಿಸಲು ಇಚ್ಛಿಸುವರೋ ಅವರು ಮೊದಲು ಪರಿಕಮ್ಮನಿಮಿತ್ತ (ಪ್ರಾಥಮಿಕ ಚಿಹ್ನೆಯಾದ ಅಗ್ನಿಯನ್ನು) ವೀಕ್ಷಿಸಬೇಕು. ಯಾರು ಹಿಂದಿನ ಜನ್ಮದಲ್ಲಿ ಇದನ್ನು ಅಭ್ಯಾಸಿರುತ್ತಾರೋ ಅವರು ಸಿದ್ಧಪಡಿಸಿಲ್ಲದ ಪ್ರಾಕೃತಿಕದತ್ತ ಅಗ್ನಿಯಿಂದ ಉದಾಹರಣೆಗೆ: ದೀಪದ ಜ್ವಾಲೆ, ಕುಲುಮೆ, ಪಾತ್ರೆಗಳ ತಯಾರಿಕಾ ಸ್ಥಳ, ಅಡವಿ ಜ್ವಾಲೆ ಇತ್ಯಾದಿ.
ಉದಾಹರಣೆಗೆ: ಥೇರ ಚಿತ್ತಗುತ್ತ (ಚಿತ್ರಗುಪ್ತ) ವಿಷಯವನ್ನೇ ತೆಗೆದುಕೊಳ್ಳೋಣ. ಅವನು ಒಮ್ಮೆ ಉಪೋಸಥದ ಗೃಹದಲ್ಲಿದ್ದಾಗ ಧಮ್ಮಸಭೆಯಲ್ಲಿ ದೀಪದ ಜ್ವಾಲೆಯನ್ನು ವೀಕ್ಷಿಸುತ್ತಿರುವಾಗಲೇ ಪತಿಭಾಗ ನಿಮಿತ್ತವು ಜಾಗೃತವಾಯಿತು, ಉದಯಿಸಿತು.
ಪೂರ್ವ ಪುಣ್ಯವಿಲ್ಲದವರು ಹೀಗೆ ಅಭ್ಯಸಿಸಬೇಕು.
ಇಲ್ಲಿ ಸಾಧಕನು ನಿರ್ಜನ ನಿಶ್ಶಬ್ದ ವಾತಾವರಣದಲ್ಲಿದ್ದು, ತೇಜೋ ಕಸಿನಕ್ಕಾಗಿ ಬೆಂಕಿಯನ್ನು ಸಿದ್ಧಪಡಿಸಬೇಕು. ಅದಕ್ಕಾಗಿ ಕಟ್ಟಿಗೆಗಳನ್ನು ತೆಗೆದುಕೊಂಡು ಬೆಂಕಿ ಹಚ್ಚಿ ಉರಿಸಬೇಕು ನಂತರ ಅದಕ್ಕೆ ಎದುರಾಗಿ ಒಂದು ಚಾಪೆ ಅಥವಾ ಬಟ್ಟೆ ಅಥವಾ ಚರ್ಮವನ್ನು ಅದಕ್ಕೆ ನೇತುಹಾಕಿ, ಸಾಧಕನಿಗೆ ವೀಕ್ಷಿಸಲು ಮುಕ್ಕಾಲು ಅಡಿಯ ವ್ಯಾಸದ ರಂಧ್ರ ಕೊರೆದು ಆ ರಂಧ್ರದ ಮೂಲಕ ಸಾಧಕನು, ಪದ್ಮಾಸನದಲ್ಲಿ ಕುಳಿತು ಗಮನಿಸುತ್ತಾ ತೇಜೋ ತೇಜೋ ತೇಜೋ ತೇಜೋ (ಬೆಂಕಿ) ಅಥವಾ ಪಾವಕ (ತೇಜಸ್ವಿ) ಅಥವಾ ಕಣ್ಣವತ್ತನಿ ಅಥವಾ ಜಾತವೇದ (ಜೀವಿಗಳ ಜ್ಞಾತ), ಅಥವಾ ಹುತಾಸವ (ಆಕೃತಿಯ ಆಸವ) ಇತ್ಯಾದಿ ಎಂದು ಜಪಿಸಬೇಕು.
ಸಾಧಕನು ಬೆಂಕಿಯ ನೀಲಿ ಇತ್ಯಾದಿ ವರ್ಣಗಳ ಬಗ್ಗೆ ಗ್ರಹಿಕೆ ಮಾಡಬಾರದು, ಹಾಗೆಯೇ ಉಷ್ಣದ ದಾತುವಿನ ಗಮನಕೊಡಬಾರದು, ಕೇವಲ ಮಧ್ಯಭಾಗದ ಜ್ವಾಲೆಯ ಮೇಲೆ ಪ್ರಬಲ ಏಕಾಗ್ರತೆ ವಹಿಸಿ ವೀಕ್ಷಿಸಬೇಕು. ಆತನು ದುರುಗುಟ್ಟಿ ನೋಡಬಾರದು. ಕೇವಲ ದರ್ಪಣವನ್ನು ವೀಕ್ಷಿಸುವಂತೆ ನೋಡಬೇಕು. ಸಾಧ್ಯವಾದಷ್ಟು ರೆಪ್ಪೆಯನ್ನು ಮಿಟುಕಿಸಬಾರದು.
ಆತನಿಗೆ ಉಗ್ಗದ ನಿಮಿತ್ತವು ಆರುವ ಜ್ವಾಲೆಯಂತೆಯೂ, ಉರಿಯುವ ಕಟ್ಟಿಗೆಯಂತೆಯೂ ಅಥವಾ ಹೊಗೆಯಂತೆಯು ಕಾಣಬಹುದು. ಆದರೆ ಪ್ರತಿಭಾಗ ನಿಮಿತ್ತವು ಆಕಾಶದಲ್ಲಿ ಅವಿಚಲ ಕೆಂಪು ಬಟ್ಟೆಯಂತೆಯೂ, ಬಂಗಾರದ ಬೀಸಣಿಕೆಯಂತೆಯೂ, ಇತ್ಯಾದಿ ರೀತಿ ಕಾಣಬಹುದು ಅದನ್ನು ಅವಲಂಬಿಸಿ ಸಾಮೀಪ್ಯ ಸಮಾಧಿ ಹಾಗೆಯೇ ಚತುರ್ಥ ಧ್ಯಾನದವರೆಗೆ ಸಿದ್ಧಿಸಬೇಕು.

4. ವಾಯು ಕಸಿನಾ :


ಯಾರು ವಾಯು ಕಸಿನಾ ಸಿದ್ಧಿಸಲು ಹೊರಟಿರುವರೋ, ಅವರು ಗಾಳಿಯನ್ನು ಧ್ಯಾನಿಸಬೇಕಾಗುತ್ತದೆ. ಗಾಳಿಯನ್ನು ವೀಕ್ಷಿಸಿಯೋ ಅಥವಾ ಅದರ ಸ್ಪರ್ಶವನ್ನು ನಿರಂತರ ಧ್ಯಾನಿಸಿ ಸಮಾಧಿ ಪಡೆಯಬೇಕಾಗುತ್ತದೆ.
ಇಲ್ಲಿ ಸಾಧಕ, ನಿರ್ಜನ, ನಿಶ್ಶಬ್ದ ಹಾಗು ಗಾಳಿಯಿಂದ ಅಲ್ಲಾಡುವ ಗಿಡಗಳ ಬಳಿ ಸಾಧನೆ ಮಾಡಬೇಕಾಗುತ್ತದೆ. ಪದ್ಮಾಸನದಲ್ಲಿ ಕುಳಿತು ಆತನು ತಲೆಯಿಂದ ನಾಲ್ಕು ಇಂಚು ಎತ್ತರದ ಎತ್ತರದಲ್ಲಿ ನಾಲ್ಕು ಅಡಿ ದೂರದಿಂದ ಅಲ್ಲಾಡುವ ಕಬ್ಬಿನ ಗಿಡವೋ ಅಥವಾ ಇನ್ನಾವುದೋ ಗಿಡವನ್ನು ವೀಕ್ಷಿಸುತ್ತಾ ವಾಯು, ವಾಯು.. ಅಥವಾ ವಾತಾ ಅಥವಾ ಮಾರುತ ಅಥವಾ ಮಾಲುತಾ ಅಥವಾ ಅನಿಲ ಎಂದು ಜಪಿಸುತ್ತಾ ಧ್ಯಾನಿಸಬೇಕು.
ಆತನಿಗೆ ಉಗ್ಗಹನಿಮಿತ್ತ ಬಿಸಿ ತಿರುಗುವ ಆವಿಯಂತೆ ಕಾಣಿಸಬಹುದು, ಹಾಗು ಪ್ರತಿಭಾಗ ನಿಮಿತ್ತವು ಶಾಂತ ಮತ್ತು ಅವಿಚಲ ಅನಿಲದಂತೆ ಕಾಣಿಸಬಹುದು. ಆವನು ಅದನ್ನು ಅವಲಂಬಿಸಿ...ಚತುರ್ಥ ಝಾನ ಪ್ರಾಪ್ತಿಗಳಿಸಬೇಕು.
ಪಯರ್ಾಯ ವಿಧಾನ : ಸಾಧಕನು ಸ್ಪರ್ಶದ ಮೂಲಕ ವಾಯು ಕಸಿನಾ ಮಾಡುವಿಕೆ, ಇಲ್ಲಿ ಆತನು ರಂಧ್ರವಿರುವ ಗೋಡೆಗೆ ಎದುರಾಗಿ ಕುಳಿತು ಆ ರಂಧ್ರದಿಂದ ಬರುವ ಗಾಳಿಗೆ ದೇಹವನ್ನು ಸ್ಪಶರ್ಿಸಿ ಅದರ ಮೂಲಕ ವಾಯುವನ್ನು ಗ್ರಹಿಸುತ್ತಾನೆ. (ನವೀನ ಯುಗವಾದುದರಿಂದ ಫ್ಯಾನ್ನ ಬಳಕೆಯಿಂದಲು ಇದನ್ನು ಸಾಧಿಸಬಹುದು). ಕೆಲವು ಕಾಲದ ನಂತರ ಆತನು ನಡೆಯುವಾಗ, ನಿಂತಿರುವಾಗ, ಕುಳಿತಿರುವಾಗ ಮತ್ತು ಮಲಗಿರುವಾಗೆಲ್ಲಾ ವಾಯುವಿನ ಅನುಭವವನ್ನು ಪಡೆಯುತ್ತಾನೆ. ವಾಯುವು ದೇಹದ ಯಾವುದೇ ಒಂದು ಭಾಗಕ್ಕೆ ಮಾತ್ರ ಸ್ಪಶರ್ಿಸಿದರೆ ಏಕಾಗ್ರತೆ ಸುಲಭ ಹಾಗು ಸಮಾಧಿ ಪಡೆಯಬಹುದು. ನಂತರ ಹಾಗೆಯೇ ಸಾಧನೆಯಿಂದ ಚತುರ್ಥ ಸಮಾಧಿ ಪಡೆಯಬೇಕು.

5. ನೀಲಕಸಿನಾ : (ನೀಲಿ/ಹಸಿರು ಕಸಿನಾ)


   ಯಾರಿಗೆ ಹಿಂದಿನ ಜನ್ಮದಲ್ಲೇ ಸಾಧನೆಯಲ್ಲಿ ಅಭ್ಯಾಸವಿರುತ್ತದೋ ಅವರು ನೀಲಿ ಪುಷ್ಪಗಳಾಗಲಿ ಅಥವಾ ಹರಳಾಗಲಿ, ವಸ್ತ್ರವಾಗಲಿ ನೋಡು ನೋಡುತ್ತಲೇ ಅವರಲ್ಲಿ ಉಗ್ಗಹನಿಮಿತ್ತ ಜಾಗೃತವಾಗುತ್ತದೆ. ಆದರೆ ಅಂತಹ ಪುಣ್ಯವಿಲ್ಲ ದವರು ಈ ಕೆಳಕಂಡಂತೆ ಅಭ್ಯಾಸಿಸಬೇಕು.
   ನೀಲ ಕಸಿಣಾ ಮಂಡಲ ನಿಮರ್ಾಣ: ನೀಲ ಕಮಲ ಅಥವಾ ಗಿರಿಕನ್ನಿಕಾ ಪುಷ್ಪಗಳನ್ನು ತಟ್ಟೆಯಲ್ಲಿ ಹಾಕಿ ಕೇವಲ ದಳಗಳನ್ನು ಹಾಕಿರಬೇಕು, ಬೇರೆ ಭಾಗಗಳಿರಬಾರದು. ಅಥವಾ ತಟ್ಟೆಗೆ ನೀಲಿ ವಸ್ತ್ರ ಸುತ್ತಿ ತಯಾರಿಸಬಹುದು, ಗೋಡೆಗೆ ನೊಗ ಹಾಕಬಹುದು. ಅಥವಾ ತಾಮ್ರ ವರ್ಣದ ಹಸಿರು, ಹಸಿರು ಎಲೆ, ಅಂಜನಾದ ಕಾಡಿಗೆಗಿಂದ ತಟ್ಟೆ ತಯಾರಿಸಿ ಅದರ ಅಂಚಿನಲ್ಲಿ ಬೇರೆ ಗಾಡ ವರ್ಣವನ್ನು ಹಾಕಿ ಸಿದ್ಧ ಮಾಡಬೇಕು.
ಸಾಧಕನು ನಿಶ್ಶಬ್ಧ, ನಿರ್ಜನ ವಾತಾವರಣದಲ್ಲಿ, ನೀಲಿಯ ಬಟ್ಟೆಯಿಂದಲೂ ಅಥವಾ ನೀಲಿ ಹೂವುಗಳಿಂದಲೊ, ಅಥವಾ ನೀಲಿ ಹರಳಿನಿಂದಲೋ ಅಥವಾ ನೀಲಿಯ ಬಣ್ಣದ ಮಂಡಲವನ್ನು ನಿಮರ್ಿಸಿ (ನೀಲಿಯ ವರ್ಣದ ಬಟ್ಟೆಯನ್ನು ತಟ್ಟೆಗೆ ಸುತ್ತಿ ಅದನ್ನು ಗೋಡೆಗೆ ನೇತುಹಾಗಿ, ಅಥವಾ ಕೆಳಗಿಟ್ಟು ಸಾಧನೆ ಮಾಡಬೇಕು. ನೀಲಿಯ ಮಂಡಲದ ಅಂಚಿನಲ್ಲಿ ಆತ ಬೇರೆ ಗಾಢವರ್ಣದ ಬಟ್ಟೆ ಹಾಕಿರಬೇಕು. ಅಥವಾ ಬಣ್ಣ ಬಳಿದಿರಬೇಕು. ಏಕೆಂದರೆ ನೀಲಿ ವರ್ಣದ ಮಂಡಲ ಎದ್ದು ಕಾಣಿಸುವಂತಿರಬೇಕು.  ನಂತರ ಆತನು 4 ಅಡಿಗಳ ದೂರದಲ್ಲಿ ಕುಳಿತು ನೀಲಿ ಮಂಡಲವನ್ನು ಆತ ತದೇಕ ದೃಷ್ಟಿಯಿಂದ ಧ್ಯಾನಿಸುತ್ತಾ ನೀಲ... ನೀಲ... ನೀಲ... ಎಂದು ಜಪಿಸುತ್ತಿರಬೇಕು. ಹೀಗೆ ಏಕಾಗ್ರತೆ ವಹಿಸಬೇಕು.
ಆತನಿಗೆ ಉಗ್ಗಹ ನಿಮಿತ್ತವು ಹೂನಂತೆ ಕಾಣಿಸುತ್ತದೆ, ನಂತರ ಪತಿಭಾಗ ನಿಮಿತ್ತವು ಆಕಾಶದಲ್ಲಿ ಸ್ಫಟಿಕದ ಬೀಸಣಿಗೆಯಂತೆ ಕಾಣಿಸುತ್ತದೆ. ನೀಲಿಯ ವಶೀಕೃತ ಚಿನ್ಹೆಯಿಂದ ಆತನು ಎಲ್ಲೆಲ್ಲೂ ನೀಲಿ ಕಾಣುತ್ತಾನೆ. ಅದು ಮಂಡಲದಿಂದ ಮುಕ್ತವಾಗಿರುತ್ತದೆ. ಅದನ್ನು ಅವಲಂಬಿಸಿ ಸಾಮೀಪ್ಯ ಸಮಾಧಿ ಹಾಗೆಯೇ... ಚತುರ್ಥ ಸಮಾಧಿ ಸಾಧಿಸಬೇಕು.

6. ಪೀತ ಕಸಿಣಾ (ಹಳದಿ ಕಸಿನಾ) :




ಇಲ್ಲಿ ಸಾಧಕನು ಧ್ಯಾನದ ಶಾಂತ ವಾತಾವರಣದಲ್ಲಿ ಹಳದಿಯ ಪುಷ್ಪಗಳನ್ನು ಅಥವಾ ಹಳದಿ ಬಟ್ಟೆಯನ್ನು ಅಥವಾ ಹಳದಿ ಧಾತುವಿನ ವಸ್ತುವನ್ನು ಅಥವಾ ಮಂಡಲ ನಿಮರ್ಿಸಿ 4 ಅಡಿ ದೂರದಲ್ಲಿಟ್ಟುಕೊಂಡು ಪದ್ಮಾಸನದಲ್ಲಿ ಅಸೀನನಾಗಿ ಹಳದಿಯ ಮಂಡಲವನ್ನು ತದೇಕ ದೃಷ್ಟಿಯಿಂದ ನೋಡುತ್ತಾ ಪೀತ...ಪೀತ...ಪೀತ ಎಂದು ಜಪಿಸುತ್ತಾ ಹಳದಿಯನ್ನು ಧ್ಯಾನಿಸಬೇಕು ಮತ್ತು ಚತುರ್ಥ ಧ್ಯಾನ ಸಾಧಿಸಬೇಕು.
ಯಾರು ಹಿಂದಿನ ಜನ್ಮದಲ್ಲಿ ಪುಣ್ಯಶಾಲಿಯೋ ಅಥವಾ ಹಿಂದಿನ ಅಭ್ಯಾಸವುಳ್ಳವರೋ ಅಂತಹವರು ಹಳದಿ ಹೂ ಪೊದೆ ಅಥವಾ ಹಳದಿ ಹೂಗಳ ರಾಶಿ ಅಥವಾ ಹಳದಿ ವಸ್ತ್ರ ಅಥವಾ ಹಳದಿ ವಸ್ತುಗಳನ್ನು ಕಂಡಕೂಡಲೇ ನಿಮಿತ್ತ ಉದಯಿಸುವುದು. ಉದಾಹರಿಸುವುದಾದರೆ: ಥೇರ ಚಿತ್ತಗುತ್ತ ಒಮ್ಮೆ ಬುದ್ಧ ಪೂಜೆಗೆಂದು ಪತ್ತಂಗ ಎಂಬ ಹಳದಿ ಹೂಗಳನ್ನು ನೋಡು ನೋಡುತ್ತಲೇ ಹೂವಿನ ಪೀಠದಷ್ಟು ಅಳತೆಯ ನಿಮಿತ್ತವು ಗೋಚರಿಸಿತು.
ಮಿಕ್ಕ ಎಲ್ಲಾ ವಿಷಯ ನೀಲಿ ಕಸಿಣಾದಂತೆಯೇ ಇರುತ್ತದೆ. ಕೇವಲ ವರ್ಣ ಮಾತ್ರ ಬೇರೆಯಾಗಿರುತ್ತದೆ. ಇಲ್ಲಿ ಪ್ರತಿಭಾಗ ನಿಮಿತ್ತವು ಕೆಲವರಿಗೆ ಆಕಾಶದ ಹಳದಿ ಸೂರ್ಯನಂತೆ ಪ್ರಕಾಶಿಸುತ್ತದೆ.

7. ಲೋಹಿತ ಕಸಿಣಾ (ಕೆಂಪು ಕಸಿನಾ) :


ಯಾರು ಹಿಂದಿನ ಜನ್ಮದಲ್ಲಿ ಅಭ್ಯಾಸ ಮಾಡಿದ್ದರ ಪುಣ್ಯಫಲವಿದ್ದರೆ ಅಂತಹವರಿಗೆ ಬಂಧು ಜೀವಕ (ದಾಸವಾಳ) ಅಥವಾ ಕರಂಡಕ (ರೋಜ) ಅಥವಾ ಜಯಸುಮನ ಪುಷ್ಪಗಳನ್ನು ನೋಡುತ್ತ ಇರುವ ಕೆಲನಿಮಿಷಗಳಲ್ಲೇ ನಿಮಿತ್ತ ಗೋಚರಿಸುವುದು.
ಇಲ್ಲಿ ಸಾಧಕನು ಕೆಂಪು ಪುಷ್ಪಗಳನ್ನು ಅಥವಾ ಕೆಂಪು ಬಟ್ಟೆಯನ್ನು ಅತವಾ ಕೆಂಪು ಹರಳನ್ನು (ಮಾಣಿಕ್ಯ) ಅಥವಾ ಯಾವುದೇ ಕೆಂಪು ದಾತುವನ್ನು/ವಸ್ತುವನ್ನು ಅಥವಾ ಕೆಂಪು ಮಂಡಲವನ್ನು ನಿಮರ್ಿಸಿ, ಅದನ್ನು ಧ್ಯಾನಿಸುತ್ತಾ ಲೋಹಿತ... ಲೋಹಿತ... ಲೋಹಿತ... ಎಂದು ಜಪಿಸುತ್ತಿರಬೇಕು. ನಂತರ ಎಲ್ಲೆಲ್ಲೂ ಕೆಂಪು ಕಾಣುವ ಉಗ್ಗಹ ನಿಮಿತ್ತ ಉಂಟಾಗುತ್ತದೆ. ನಂತರ ಎಲ್ಲೆಲ್ಲೂ ಕೆಂಪು ಕಾಣುವ ಉಗ್ಗಹ ನಿಮಿತ್ತ ಉಂಟಾಗುತ್ತದೆ. ನಂತರ ಪತಿಭಾಗ ನಿಮಿತ್ತ ಉಂಟಾಗುತ್ತದೆ. ಹೀಗೆಯೇ ಚತುರ್ಥ ಸಮಾಧಿ ಪ್ರಾಪ್ತಿಗಾಣಿಸಬೇಕು.

8. ಒದತ (ಬಿಳಿ/ಶ್ವೇತ) ಕಸಿನ :


ಯಾರು ಹಿಂದಿನ ಜನ್ಮದಲ್ಲಿ ಸಾಧನೆ ಮಾಡಿದ್ದ ಪುಣ್ಯಶಾಲಿಗಳಿದ್ದರೆ ಅಂತಹವರು ವಸ್ಸಿಕುಸುಮ (ಮಲ್ಲಿಗೆ)ಗಳ ರಾಣಿ, ಬಿಳಿ ಕಮಲ (ಪದುಮ), ಕುಮುದ ಪುಷ್ಪ, ಶ್ವೇತವಸ್ತ್ರ, ಅಥವಾ ಬಿಳಿವಸ್ತ್ರ ಅಥವಾ ಬಿಳಿ ವಸ್ತು ಅಥವಾ ಸೀಸದ ತಟ್ಟೆ (ಮಂಡಲ) ಅಥವಾ ಬೆಳ್ಳಿ ತಟ್ಟೆ ಅಥವಾ ಚಂದಿರನ ತಟ್ಟೆ (ಹುಣ್ಣಿಮೆಯ ಚಂದಿರ) ದಿಟ್ಟಿಸುತ್ತಿದ್ದರೆ ಕೆಲವು ನಿಮಿಷಗಳಲ್ಲೇ ನಿಮಿತ್ತವು ಉದಯಿಸುವುದು. ಅದರಿಂದ ಸಮಾಧಿ ಪಡೆಯುವರು. ಹಾಗಿಲ್ಲದವರು ಸಾಧನೆ ಮಾಡಬೇಕಾಗಿದೆ.
ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿದ್ದು, ಆತನು ಬಿಳಿ ಕಸಿನಗೋಸ್ಕರ ಬಿಳಿಯ ಬಟ್ಟೆಯನ್ನು ಅಥವಾ ಬಿಳಿಯ ವರ್ಣದ ಪುಷ್ಪಗಳನ್ನೋ ಅಥವಾ ಬಿಳಿಮಂಡಲ ಅಥವಾ ಬಿಳಿಯ ದಾತು/ವಸ್ತುವನ್ನು ಇಟ್ಟುಕೊಂಡು ತದೇಕವಾಗಿ ನೋಡುತ್ತಾ (ಬಿಳಿ) ಬಿಳಿ...ಬಿಳಿ...ಬಿಳಿ... ಎಂದು ಜಪಿಸುತ್ತಾ ಏಕಾಗ್ರತೆ ಸಾಧಿಸಬೇಕು... ನಂತರ ಉಗ್ಗಹ ನಿಮಿತ್ತ ಉಂಟಾಗುತ್ತದೆ. (ಹಾಗೆಯೇ ನೀಲಿ ಕಸಿನಾದಲ್ಲಿ ವಿವರಿಸುವಂತೆ) ಚತುರ್ಥ ಸಮಾಧಿ
ಪಡೆಯಬೇಕು.

9. ಅಲೋಕ ಕಸಿಣಾ(ಬೆಳಕಿನ ಕಸಿನಾ) :




ಯಾರು ಅಲೋಕ ಕಸಿಣ ಕಲಿಯಬೇಕೆನ್ನುವ ಆಕಾಂಕ್ಷಿಗಳೋ ಅವರು ಗೋಡೆಯಲ್ಲಿನ ರಂಧ್ರವನ್ನೋ ಅಥವಾ ತೆರೆದ ಕಿಟಕಿಯ ಬೆಳಕನ್ನೋ ಗ್ರಹಿಸಬೇಕು. ಯಾರು ಹಿಂದಿನ ಜನ್ಮದ ಧ್ಯಾನಪ್ರಾಪ್ತಿಗಳೋ ಅಂತಹ ಪುಣ್ಯಶಾಲಿಗಳು ಗೋಡೆಯ ಮೇಲೆ ಬಿದ್ದಂತಹ ಬೆಳಕಿನ ವೃತ್ತ, ಸೂರ್ಯನ ಬೆಳಕಿನ ವೃತ್ತ ಅಥವಾ ಚಂದಿರನ ಬೆಳಕಿನ ವೃತ್ತ ಅಥವಾ ಮರಗಳಿಂದ ತೂರಿ ಬರುತ್ತಿರುವ ಬೆಳಕಿನಿಂದ ಉಂಟಾಗಿರುವ ಬೆಳಕಿನ ವೃತ್ತ. ಇವುಗಳನ್ನು ನೋಡು ನೋಡುತ್ತಲೇ ಅವರಿಗೆ ಪಟಿಭಾಗ ನಿಮಿತ್ತವು ಉದಯಿಸುತ್ತದೆ. ಹಾಗಿಲ್ಲದವರು ಹೀಗೆ ಅಭ್ಯಸಿಸಬೇಕು.
ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿ ನೆಲೆಸಿ ಒಂದು ಗುಂಡಾಗಿರುವ ಪಾತ್ರೆಯಲ್ಲಿ ನೀರನ್ನು ಹಾಕಿ, ಅದನ್ನು ಸೂರ್ಯನ ಮುಂದೆ ಇರಿಸುತ್ತಾನೆ. ಅದರ ಪ್ರತಿಫಲನವನ್ನು ಗೋಡೆಯ ಮೇಲೆ ಬೀಳುವಂತೆ ಇಡುತ್ತಾನೆ. ನಂತರ ಗೋಡೆಗೆ ಅಭಿಮುಖವಾಗಿ ಕುಳಿತು ಆ ಬೆಳಕನ್ನು ವೀಕ್ಷಿಸುತ್ತಾ ಧ್ಯಾನಿಸುತ್ತಾ ಅಲೋಕ...ಅಲೋಕ...ಅಲೋಕ... ಅಥವಾ ಓಭಾಸ ಎಂದು ಧ್ಯಾನಿಸುತ್ತಾ ಜಪಿಸುತ್ತಾ ಸಮಾಧಿಯ ಹಂತಗಳನ್ನು ಪ್ರಾಪ್ತಿಮಾಡುತ್ತಾನೆ.
ಪಯರ್ಾಯ ವಿಧಾನ : ಆತನು ಒಂದು ದೀಪವನ್ನು ರಂಧ್ರದ ಮಡಿಕೆಯಲ್ಲಿಟ್ಟು, ಆ ರಂಧ್ರದಿಂದ ಗೋಡೆಯ ಮೇಲೆ ಬೀಳುವ ಬೆಳಕಿನ ಅಭಿಮುಖವಾಗಿ ಕುಳಿತು ಆ ಬೆಳಕನ್ನೇ ಧ್ಯಾನಿಸುತ್ತಾನೆ. ಅಲೋಕ... ಎಂದು ಜಪಿಸುತ್ತಾ ಧ್ಯಾನಿಸುತ್ತಾ... ಇರುವಾಗ ಆತನಗೆ ಉಗ್ಗಹ ನಿಮತ್ತವು ಬೆಳಕಿನ ವೃತ್ತದಂತೆ ಕಾಣಿಸುತ್ತದೆ ಮತ್ತು ಪ್ರತಿಭಾಗ ನಿಮಿತ್ತವು ಬೆಳಕಿನ ಗೊಂಚಲಿನಂತೆ ಕಂಡುಬರುತ್ತದೆ. ಅದನ್ನು ಅವಲಂಬಿಸಿ ಧ್ಯಾನಿಸಿ ಚತುರ್ಥ ಧ್ಯಾನ ಪಡೆಯುತ್ತಾರೆ.

10. ಪರಿಚಿನ್ನ (ಪರಿಮಿತ) ಆಕಾಶ ಕಸಿಣ ಧ್ಯಾನ :

    ಹಿಂದಿನ ಜನ್ಮದಲ್ಲಿ ಸಾಧನೆ ಮಾಡಿರುವವರಾಗಿದ್ದರೆ ಗೋಡೆಯಲ್ಲಿನ, ಛಾವಣಿಯಲ್ಲಿನ ರಂಧ್ರದಿಂದ ಅಕಾಶ ಗಮನಿಸುತ್ತಲೇ ನಿಮಿತ್ತ ಉದಯಿಸುವುದು.
  ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿದ್ದು ಯಾವುದಾದರೂ ರಂಧ್ರವಿರುವ ಗೋಡೆಯ ಮೂಲಕ ಕಾಣಿಸುವ ಆಕಾಶವನ್ನು ಧ್ಯಾನಿಸಬೇಕಾಗುತ್ತದೆ. ಅಥವಾ ಚಿಕ್ಕ ಕಿಟಕಿಯ ಮೂಲಕ ಕಾಣಿಸುವ ಆಕಾಶವನ್ನು ಧ್ಯಾನಿಸುತ್ತಾ... ಆಕಾಶ... ಆಕಾಶ... ಎಂದು ಜಪಿಸುತ್ತಾ ಧ್ಯಾನಿಸುತ್ತಾನೆ. ಹಾಗೆಯೇ ಚತುರ್ಥ ಧ್ಯಾನವನ್ನು ಪ್ರಾಪ್ತಿಮಾಡುತ್ತಾನೆ.
ಆತನ ಪತಿಭಾಗ ನಿಮಿತ್ತವು ಉಗ್ಗಹ ನಿಮಿತ್ತದಂತೆಯೇ ಗೋಚರಿಸುವುದು. ಅದನ್ನು ವಿಕಸಿಸಬೇಕು. ಉಳಿದದ್ದು ಹಿಂದಿನಂತೆಯೇ.

ಕಸಿನಗಳಲ್ಲಿ ಪ್ರಾವಿಣ್ಯತಾ ಸಿದ್ಧಿಗಳಿಸುವಿಕೆ ಹೇಗೆ ?

1. ಆತ ಅಭಿವೃದ್ಧಿ ಹೊಂದಿದ ಬಳಿಕ ಆತನಿಗೆ ಮಂಡಲಗಳು ಬೇಕಾಗಿರುವುದಿಲ್ಲ. ಆತನು ಸ್ವಾಭಾವಿಕವಾಗಿಯೆ ಗ್ರಹಿಕೆ ಧ್ಯಾನಿಸುತ್ತಾನೆ. ಉದಾಹರಣೆಗೆ ಹೊಲವನ್ನು ನೋಡಿಯೋ ಅಥವಾ ನದಿಯನ್ನು ನೋಡಿಯೋ, ಆಕಾಶವನ್ನು, ಚಂದ್ರನನ್ನು ನೋಡಿಯೋ, ಹಾಗೆಯೇ ಪ್ರಾಕೃತಿಕವಾಗಿ ನಿಮಿತ್ತ ಬಳಸುತ್ತಾನೆ.
2. ಮುಂದೆ ಉಗ್ಗಹ ನಿಮಿತ್ತ ಬಳಸುತ್ತಾನೆ, ಪ್ರಾಕೃತಿಕವಲ್ಲ.
3. ನಂತರ ಪ್ರತಿಭಾಗ ನಿಮಿತ್ತ ಬಳಸುತ್ತಾನೆ. ಉಗ್ಗಹವಲ್ಲ ಮತ್ತು ಅದನ್ನು ಸುತ್ತಮುತ್ತ ಎಲ್ಲಾ ದಿಕ್ಕಿಗೂ ವಿಕಸಿಸುತ್ತಾನೆ.
4. ಮುಂದೆ ಧ್ಯಾನಂಗಗಳನ್ನು ಬಳಸುತ್ತಾನೆ ಹಾಗೆಯೇ ಚತುರ್ಥ ಸಮಾಧಿ ಪಡೆಯುತ್ತಾನೆ.
5. ಎಲ್ಲಾ ಕಸಿನಾದಲ್ಲೂ ಚತುರ್ಥ ಧ್ಯಾನ ಪ್ರಾಪ್ತಿಮಾಡಿದರೆ ಆತ ಅಸಾಮಾನ್ಯ ಸಿದ್ಧಿಗಳನ್ನು ಮನೋ ಪ್ರಭುತ್ವವನ್ನು ಪಡೆದಿರುತ್ತಾನೆ.
6. ಆತ ಪ್ರಥಮದಿಂದ ನೇವಸನ್ಯಾನಸನ್ಯಾ ಆಯಾತನವರೆಗೆ ಧ್ಯಾನಿಸಬೇಕು ಏರುಮುಖವಾಗಿ.
7. ಹಾಗೆಯೇ ಇಳಿಮುಖವಾಗಿ ಪ್ರಥಮ ಸಮಾಧಿಗೆ ಬರಬೇಕು.
8. ಆತ ಎಲ್ಲಾ ಕಸಿಣಾಗಳಲ್ಲಿ ಧ್ಯಾನದಿಂದ ಧ್ಯಾನಕ್ಕೆ ಜಿಗಿಯಬೇಕು.
9. ಆತ ಎಲ್ಲಾ ಕಸಿನಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಜಿಗಿಯಬೇಕು.
10. 4 ಇದ್ದಿಪಾದಗಳ ವೃದ್ಧಿ, ನಂತರ ಆತನು ಧ್ಯಾನದ ಕಡೆ ಲಕ್ಷಿಸುವಿಕೆ, ಚತುರ್ಧ್ಯಾನದಲ್ಲಿ ದೀರ್ಘಕಾಲ ನೆಲೆಸುವಿಕೆ, ಶೀಘ್ರವಾಗಿ ಹೊರಬರುವಿಕೆ ನಂತರ ಪುನರ್ ಅವಲೋಕನ ಇವನ್ನು ಸಾಧಿಸುತ್ತಾನೆ.


ಕಸಿಣ ಧ್ಯಾನದಿಂದ ಲಭಿಸುವ ಸಿದ್ಧಿಗಳು: 

ದಶಬಲಧಾರಿಗಳಾದ ಭಗವಾನರು ಎಲ್ಲವನ್ನು ವೀಕ್ಷಿಸಿದ್ದಾರೆ.
ಹೇಳುವರು 10 ಕಸಿಣಾಗಳ ಬಗ್ಗೆಯೂ,
ಅವೆಲ್ಲಾ ಚತುರ್ಥವಿಧ ಹಾಗು ಪಂಚವಿಧಗಳಲ್ಲಿ ವಿಂಗಡಿನೆಯಾಗಿದೆ.
ರೂಪವಚರ ಕ್ಷೇತ್ರವೂ ತನ್ನ ಕೀಲಿ ಕೈಯೂ,
ಅವುಗಳ ವಿವರಣೆ ಹಾಗು ಮಾರ್ಗವನ್ನು ವಿವರಿಸಲಾಗಿದೆ
ವಿಕಾಸವನ್ನು ಜೊತೆಗೆ ಪ್ರತಿ ಹಿಡಿತ ಹಾಗು ಎದುರಿಸುವಿಕೆಯನ್ನು
ಅಭ್ಯಾಸಿಸಿರಿ, ಪ್ರತಿಯೊಂದು ಆಡುವುದಕ್ಕಾಗಿ ವಿಶೇಷವಾಗಿವೆ.
ಪಠವಿ ಕಸಿನಾದ ಅಭಿಜ್ಞಾ ಲಾಭಗಳು : ಹಲವು ಶರೀರಗಳನ್ನು ಪಡೆಯುತ್ತಾನೆ. ಹಾಗೆಯೇ ಏಕ ಶರೀರಧಾರಿಯು ಆಗುತ್ತಾನೆ, ನೀರಿನಲ್ಲಿ ಅಥವಾ ಆಕಾಶದಲ್ಲಿ ಭೂಮಿಯಂತೆ, ನಡೆಯುತ್ತಾನೆ, ನಿಲ್ಲುತ್ತಾನೆ, ಕೂರುತ್ತಾನೆ ಮತ್ತು ಮಲಗುತ್ತಾನೆ ಮತ್ತು ಇತ್ಯಾದಿ.
ಅಪೋ ಅಭಿಜ್ಜಾ ಲಾಭಗಳು: ಇದರಲ್ಲಿ ಪ್ರಾವಿಣ್ಯ ಪಡೆದ ಸಿದ್ಧನು ಭೂಮಿಯಲ್ಲಿ ನೀರಿನಂತೆ ಮುಳುಗಬಲ್ಲ. ಮಳೆಗಳನ್ನು ತರಿಸಬಲ್ಲ. ಭೂಕಂಪನ ಮಾಡಬಲ್ಲ. ನದಿ ಹಾಗು ಸಾಗರಗಳನ್ನೇ ಸೃಷ್ಟಿಸಬಲ್ಲ ಇತ್ಯಾದಿ.
ಧ್ಯಾನಿಯ ಎಲ್ಲಾ ಕಸಿಣಗಳನ್ನು ಮೇಲ್ಮುಖವಾಗಿ (ಆಕಾಶದವರೆಗೂ), ಕೆಳಮುಖವಾಗಿ (ನೆಲದವರೆಗೂ) ಸುತ್ತಲೂ (ಎಲ್ಲೆಲ್ಲೂ) ಅಳತೆಗೆ ಅತೀತವಾಗಿ ವಿಕಸಿಸುತ್ತಾನೆ. ಅನಂತವಾಗಿ ವಿಕಾಸಗೊಳಿಸುತ್ತಾನೆ.
ತೇಜೋ ಅಭಿಜ್ಞಾ ಲಾಭಗಳು : ಸಾಧಕನಿಗೆ ಹೊಗೆ ಸೃಷ್ಟಿಸುವ, ಬೆಂಕಿಯನ್ನು ಸೃಷ್ಟಿಸುವ, ಕಿಡಿಗಳನ್ನು ಸೃಷ್ಟಿಸುವ, ಉರಿಸುವ ಸಾಮಥ್ರ್ಯ ಸಿಗುತ್ತದೆ. ಇಚ್ಛಿಸುವುದನ್ನು ಸುಡುವ ಸಾಮಥ್ರ್ಯ ಸಿಗುತ್ತದೆ. ಹಾಗೆಯೇ ದಿವ್ಯದೃಷ್ಟಿ ಲಭಿಸುತ್ತದೆ ಮತ್ತು ಇತ್ಯಾದಿ.
ವಾಯು ಅಭಿಜ್ಞಾ ಲಾಭಗಳು : ಆತನು ವಾಯುವಿನ ವೇಗದಷ್ಟು ಚಲಿಸಬಲ್ಲ, ಬಿರುಗಾಳಿಯನ್ನು ಚಂಡಮಾರುತವನ್ನು ಸೃಷ್ಟಿಸಬಲ್ಲ ಇತ್ಯಾದಿ.
ನೀಲ ಅಭಿಜ್ಞಾ ಲಾಭಗಳು : ಆತ ನೀಲಿ ವರ್ಣದ ಯಾವುದೇ ವಸ್ತುಗಳನ್ನು ಸೃಷ್ಟಿಸಬಲ್ಲ, ಆತ ಯಾವುದೇ ವಸ್ತುವನ್ನು ನೀಲಿಯಾಗಿ ಪರಿವರ್ತನೆ ಮಾಡಬಲ್ಲ. ಹಾಗೆಯೇ ಕಪ್ಪು ಆಕಾರಗಳನ್ನು ಸೃಷ್ಟಿಸಬಲ್ಲ. ಕತ್ತಲೆಯನ್ನು ತರಿಸಬಲ್ಲ. ಸುಂದರನಾಗಬಲ್ಲ. ಹಾಗೆಯೇ ಕುರೂಪಿಯೂ ಆಗಬಲ್ಲ ಮತ್ತು ಶುಭ ವಿಮೋಕ್ಷ ಪಡೆಯಬಲ್ಲ.
ಪೀತ ಅಭಿಜ್ಞಾ ಲಾಭಗಳು : ಇಲ್ಲಿ ಆತನು ಹಳದಿ ವರ್ಣದ ಯಾವುದೇ (ಚಿನ್ನ) ವಸ್ತುವನ್ನು ಸೃಷ್ಠಿಸಬಹುದು. ಯಾವುದನ್ನು ಹಳದಿಯಾಗಿ ಪರಿವತರ್ಿಸಬಹುದು ಮತ್ತು ಶುಭ ವಿಮೋಕ್ಷ ಪಡೆಯುತ್ತಾನೆ.
ಲೋಹಿತ ಅಭಿಜ್ಞಾ ಲಾಭಗಳು : ಯಾವುದೇ ವಸ್ತುವನ್ನು ಕೆಂಪಾಗಿ ಪರಿವತರ್ಿಸಬಲ್ಲ ಕೆಂಪು ವರ್ಣದ ವಸ್ತುಗಳನ್ನು ಸೃಷ್ಟಿಸಬಲ್ಲ ಮತ್ತು ಶುಭ ವಿಮೋಕ್ಷ ಪಡೆಯುತ್ತಾನೆ.
ಬಿಳಿ ಅಭಿಜ್ಞಾ ಲಾಭಗಳು : ಆತನು ಜಡತೆ, ನಿದ್ರಾ, ಸೋಮಾರಿತನದಿಂದ ದೂರವಾಗುತ್ತಾನೆ. ಯಾವುದೇ ವಸ್ತುವನ್ನು ಬಿಳಿಯಾಗಿ ಪರಿವತರ್ಿಸಬಲ್ಲ. ಬಿಳಿಯ ವಸ್ತುಗಳನ್ನು ಸೃಷ್ಟಿಸಬಲ್ಲ. ಬಿಳುಪನ್ನು ಸೃಷ್ಟಿಸಬಲ್ಲ. ದಿವ್ಯದೃಷ್ಟಿ ಪ್ರಾಪ್ತಿಯಾಗಿ ಅದರಿಂದ ಭೂತ, ಭವಿಷ್ಯ, ವರ್ತಮಾನದ ಎಲ್ಲವನ್ನೂ ಅರಿಯಬಲ್ಲ ಮತ್ತು ಶುಭ ವಿಮೋಕ್ಷ ಪಡೆಯಬಲ್ಲ.
ಅಲೋಕ ಅಭಿಜ್ಞಾ ಲಾಭಗಳು : ಆತನು ಹೊಳೆಯುವಂತಹ ಆಕಾರಗಳನ್ನು ಸೃಷ್ಟಿಸುತ್ತಾನೆ. ಜಡತೆ, ನಿದ್ರಾವಸ್ಥೆ, ದೂರಿಕರಿಸುತ್ತಾನೆ. ಕತ್ತಲೆಯನ್ನು ಹೋಗಲಾಡಿಸುತ್ತಾನೆ. ಬೆಳಕನ್ನು ಸೃಷ್ಟಿಸುತ್ತಾನೆ ಮತ್ತು ದಿವ್ಯದೃಷ್ಟಿ ಪ್ರಾಪ್ತಿಮಾಡುತ್ತಾನೆ. ಇತ್ಯಾದಿ.
ಆಕಾಶ ಅಭಿಜ್ಞಾ ಲಾಭಗಳು : 1. ಆತನಿಗೆ ಅಡಗಿರುವ ಪ್ರತಿಯೊಂದನ್ನು ನೋಡುತ್ತಾನೆ. ಭೂಮಿಯಲ್ಲಿರುವ ನೀರು, ಖನಿಜಗಳು, ಐಶ್ವರ್ಯ ಎಲ್ಲಾ ನೋಡುತ್ತಾನೆ.  2. ಭೂಮಿಯಲ್ಲಿ ಸ್ಥಳವನ್ನು ಸೃಷ್ಟಿಸಿ ಒಳಗೆ ಹೋಗುತ್ತಾನೆ. ಗೋಡೆಗಳು, ಬಂಡೆಗಳ ಮೂಲಕ ಹಾದುಹೋಗುತ್ತಾನೆ ಇತ್ಯಾದಿ.

ಯಾರ್ಯಾರಿಗೆ ಕಸಿಣಾವಾಗಲಿ ಅಥವಾ ಯಾವುದೇ ಧ್ಯಾನವಾಗಲಿ ಸಿದ್ಧಿಸುವುದಿಲ್ಲ ?
1. ಯಾರು ಪಂಚಭಾರವಾದ ಹೀನಕರ್ಮ ಮಾಡಿರುವರೋ ಅವರಿಗೆ ಸಿದ್ಧಿಸುವುದಿಲ್ಲ (ಅದೆಂದರೆ: ಮಾತೃಹಂತಕ, ಪಿತೃಹಂತಕ, ಅರಹಂತ ಹಂತಕ, ಬುದ್ಧರಿಗೆ ಗಾಯ ಮತ್ತು ಸಂಘಬೇಧ ಮಾಡಿರುವವರಿಗೆ).
2. ಕ್ಲೇಷಗಳಿಂದ ಕೂಡಿದವನು ಅಂದರೆ ಮಿಥ್ಯಾದೃಷ್ಟಿ ಹೊಂದಿರುವವನು (ಅಕಾರಣವಾದ, ಕಮ್ಮನಿಯಮ ಒಪ್ಪದವನು, ದಾನಕ್ಕೆ ಅಥವಾ ಹತ್ಯೆಗೆ ಫಲವಿಲ್ಲ ಎನ್ನುವವನು) ಹಾಗು ಉಭಯಲಿಂಗಿಗೆ ಮತ್ತು ನಪುಂಸಕನಿಗೆ ಧ್ಯಾನ ಸಿದ್ಧಿಯಿಲ್ಲ.
3. ಕುಶಲ ಮೂಲ ಇಲ್ಲದೆ ಹುಟಿರುವವನು.
4. (ತ್ರಿರತ್ನಗಳಲ್ಲಿ) ನಂಬಿಕೆಯೇ ಇಲ್ಲದವನು.
5. ಉತ್ಸಾಹವಿಲ್ಲದವನಿಗೆ ಧ್ಯಾನಸಿದ್ಧಿಯಿಲ್ಲ.
6. ಧ್ಯಾನಗಳನ್ನು ಅರ್ಥ ಮಾಡಿಕೊಳ್ಳಲು ವಿಫಲನಾಗಿರುವವನಿಗೆ.

ಸಜ್ಜನರ ಸುಖಕ್ಕಾಗಿ ರಚಿತವಾಗಿರುವ ವಿಸುದ್ದಿಮಗ್ಗದ ಸಮಾಧಿ ಭಾಗದಲ್ಲಿನ
ಶೇಷ ಕಸಿಣಾದ ನಿದ್ದೆಸದ ಅಧ್ಯಾಯ ಮುಗಿಯಿತು 

No comments:

Post a Comment